ಕೆಲವರಿರುತ್ತಾರೆ ಮೊಸರನ್ನ ತಿಂದ್ರೂ ಬಿರಿಯಾನಿ ತಿಂದ ರೇಂಜಿಂಗೆ ಬಿಲ್ಡಪ್ ಕೊಟ್ಟುಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಉಂಡೆ ನಾಮ ತೀಡುತ್ತಿರುತ್ತಾರೆ. ಅದರಲ್ಲೂ ಈ ಬಣ್ಣದ ಲೋಕದಲ್ಲಿ ಇಂತಹ ಅಬೇಪ್ಪಾರಿಗಳ ಕಾಟ ಅಷ್ಟಿಷ್ಟಲ್ಲ. ಸಿನಿಮಾ ಸೆಳೆತದಿಂದ ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು, ಅವಕಾಶಕ್ಕಾಗಿ ಕೆಂಪು ಬಸ್ಸು ಹತ್ತಿ ಬರುವ ಅಸಂಖ್ಯಾತ ಪ್ರತಿಭೆಗಳೇ ಇವರ ಟಾರ್ಗೇಟು. ಆ ಪ್ರೊಡ್ಯೂಸರ್ ಗೊತ್ತು. ಆ ಡೈರೆಕ್ಟರ್ ಗೊತ್ತು ಅಂತ ಡುಬಾಕ್ ಮಾತನಾಡಿ ಊರಿಂದ ತಂದಿದ್ದ ಹಣವನ್ನೆಲ್ಲ ನುಣ್ಣಗೆ ಮಾಡಿ ಚೊಂಬು ಕೊಡಲು ಸಿದ್ದರಾಗಿಬಿಡುತ್ತಾರೆ. ಇಂತಹ ಖದೀಮರ ಖೆಡ್ಡಾಕ್ಕೆ ಬಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆಯೇ ವಿನಃ ಇಳಿಯುತ್ತಿಲ್ಲ. ಇತ್ತೀಚಿಗೆ ಇಂತಹುದೇ ಘಟನೆಯೊಂದು ನಡೆದಿದೆ.

ಹೌದು  ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬಳನ್ನು ವಂಚಿಸಿದ ಹಾಗೂ ಕೊಲೆ ಯತ್ನ ನಡೆಸಿದ ಘಟನೆ ನಡೆದಿದ್ದು, ಆರೋಪಿಗಳಾದ ಶಬರೀಶ್ ಶೆಟ್ಟಿ ಮತ್ತು ನವೀನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಶಬರೀಶ್ ಅರುಣ್ ಚಿತ್ರದಲ್ಲಿ ನಾಯಕ ನಟನಾಗಿ ಕೆಲಸ ಮಾಡಿದ್ದನು. ಈತ ನವೀನ್ ಎಂಬಾತನೊಂದಿಗೆ ಸೇರಿ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ್ದಾರೆ. ಅಲ್ಲದೆ ಫೆನಾರ್ಗನ್ ಮತ್ತು ಕೀಟಮೈನ್ ಲಸಿಕೆ ನೀಡಿ ಮಹಿಳೆಯ ಕೊಲೆಗೂ ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಗಳ ವಿರುದ್ಧವಾಗಿ ಮತ್ತಷ್ಟು ವಂಚನೆ ಆರೋಪಗಳೂ ಕೇಳಿಬಂದಿದ್ದು, ಕೆ.ಆರ್. ಪುರಂ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

 

 

CG ARUN

ಆದಿಲಕ್ಷ್ಮಿ ಪುರಾಣ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್!

Previous article

ಮಹಿಳಾ ಬಾಡಿಬಿಲ್ಡರ್ ಗೆ ಯುವರತ್ನದಲ್ಲಿ ಸಿಕ್ಕಿದೆ ಚಾನ್ಸು!

Next article

You may also like

Comments

Leave a reply

Your email address will not be published. Required fields are marked *