ರಸ್ತೆ ಅಪಘಾತದಲ್ಲಿ ತೆಲುಗಿನ ಮುತ್ಯಾಲ ಮೊಗ್ಗು ಖ್ಯಾತಿಯ ಕಿರುತೆರೆ ನಟಿ ಭಾರ್ಗವಿ ದುರ್ಮರಣ. ಶೂಟಿಂಗ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ವಿಕಾರಬಾದ್ ಬಳಿ ಘಟನೆ ಸಂಭವಿಸಿದೆ. ಭಾರ್ಗವಿ ಇದ್ದ ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಭಾರ್ಗವಿ ಮತ್ತು ಅನುಷಾ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಅನಂತಗಿರಿ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ರಿಟನ್ ಆಗುತ್ತಿದ್ದಾಗ, ಎದುರು ಬರುತ್ತಿದ್ದ ಲಾರಿಯಿಂದ ಬಚಾವಾಗಲು ಹೋಗಿರುವ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
No Comment! Be the first one.