ನಿರ್ದೇಶಕ ಎ ಹರ್ಷ ರಾಕಿಂಗ್ ಸ್ಟಾರ್ ಯಶ್ ಅವರಿಗೆಂದೇ ರಾಣಾ ಚಿತ್ರದ ಕಥೆ ಸಿದ್ಧ ಪಡಿಸಿಕೊಂಡಿದ್ದರು. ಅದಕ್ಕೆ ಶುಭಾರಂಭ ಸಿಗುತ್ತದೆ ಎಂಬಂಥಾ ವಾತಾವರಣವೂ ಇತ್ತು. ಆದರೆ ಕೆಜಿಎಫ್ ಚಿತ್ರದ ಭರಪೂರ ಗೆಲುವಿನ ನಂತರದಲ್ಲಿ ಹವಾಮಾನ ಸಂಪೂರ್ಣವಾಗಿ ಬದಲಾಗಿದೆ. ಅದರ ಫಲವಾಗಿ ಯಶ್ ರಾಣಾ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿಯೂ ಹೊರ ಬಿದ್ದಿದೆ.
ಇಂಥಾದ್ದೊಂದು ಸುದ್ದಿಯ ಬೆನ್ನಲ್ಲಿಯೇ ಯಶ್ ಬದಲಾಗಿ ಹರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಚಿತ್ರ ಮಾಡಲಿದ್ದಾರೆಂಬ ರೂಮರುಗಳೂ ಹಬ್ಬಿಕೊಂಡಿದ್ದವು. ಅದೀಗ ನಿಜವಾಗಿದೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಸುದ್ದಿ ಅಧಿಕೃತಗೊಂಡು ಸದರಿ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅನ್ನೋ ಟೈಟಲ್ಲೂ ಅನಾವರಣಗೊಂಡಿದೆ!
ಈ ಹಿಂದೆ ಭಜರಂಗಿ ಮೂಲಕ ಹರ್ಷ ಮತ್ತು ಶಿವಣ್ಣ ಸೂಪರ್ ಹಿಟ್ ಚಿತ್ರವನ್ನ ನೀಡಿದ್ದರು. ಆ ನಂತರ ಇದೇ ಜೋಡಿ ವಜ್ರಕಾಯ ಚಿತ್ರದ ಮೂಲಕ ಒಂದಾಗಿತ್ತು. ಆದರೆ ಅದಕ್ಕೆ ಸಿಕ್ಕಿದ್ದು ಆವರೇಜ್ ಗೆಲುವು. ಈ ಹಂತದಲ್ಲಿಯೇ ಶಿವಣ್ಣ ಹರ್ಷ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸೋ ಸೂಚನೆ ನೀಡಿದ್ದರೂ ಯಾಕೋ ಅದು ಕ್ರಮೇಣ ತಣ್ಣಗಾಗಿತ್ತು. ಇದೀಗ ಮೈ ನೇಮ್ ಈಸ್ ಆಂಜಿ ಮೂಲಕ ಹ್ಯಾಟ್ರಿಕ್ ಹೀರೋ ಜೊತೆಗಿನ ಹರ್ಷ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಮುಂದುವರೆದಿದೆ. ಇದೀಗ ಹರ್ಷ ಈ ಚಿತ್ರದ ಕಥೆ ಮತ್ತು ಚಿತ್ರಕಥೆಗೆ ಅಚಿತಿಮ ಸ್ಪರ್ಶ ನೀಡುತ್ತಿದ್ದಾರೆ. ಇದೆಲ್ಲವೂ ಮುಗಿದು, ತಾರಾಗಣವೂ ಅಚಿತಿಮವಾದ ನಂತರ ಜೂನ್ ತಿಂಗಳಲ್ಲಿ ಮೈ ನೇಮ್ ಈಸ್ ಆಂಜಿಗೆ ಚಾಲನೆ ಸಿಗಲಿದೆ. ಅಂದಹಾಗೆ ಈ ಸಿನಿಮಾದಲ್ಲಿ ಶಿವಣ್ಣನ ಲುಕ್ ಗೆ ಮತ್ತಷ್ಟು ಬದಲಾವಣೆ ಕೊಡಲು ಹರ್ಷ ತೀರ್ಮಾನಿಸಿದ್ದಾರಂತೆ!