ಮೈ ನೇಮ್ ಇಸ್ ರಾಜಾ.. ಹಿ ಇಸ್ ಡಿಫ್ರೆಂಟ್ ‘ ಎಂಬ ಟೈಟಲ್ ಮೂಲಕ ಸದ್ದು ಮಾಡುತ್ತಿರುವ ಚಿತ್ರದ ಮೋಷನ್ ಟೀಸರ್ ಲಾಂಚ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ವಿಭಿನ್ನವಾದ ಟೈಟಲ್ ಕಥೆಗಳು ಬಂದೆ ಬರುತ್ತಿವೆ. ವಾರದಲ್ಲಿ ಬಿಡುಗಡೆಯಾಗುವ ನಾಲ್ಕೈದು ಸಿನಿಮಾಗಳಲ್ಲಿ ಎರಡು ಸಿನಿಮಾವಂತೂ ಹೊಸಬರ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗಳು ಇದ್ದೇ ಇರುತ್ತವೆ. ಇದೀಗ ಅದೇ ಸಾಲಿಗೆ ‘ಮೈ ನೇಮ್ ಇಸ್ ರಾಜಾ’ ಎನ್ನುವ ಸಿನಿಮಾ ಕೂಡಾ ಸೇರಿಕೊಂಡಿದೆ. ಈ ಚಿತ್ರದ ಮೋಷನ್ ಟೀಸರ್ ರಿಲೀಸ್ ಆಗಿದ್ದು, ವಿಭಿನ್ನವಾಗಿ ಮೂಡಿ ಬಂದಿದೆ. ಮೈ ನೇಮ್ ಇಸ್ ರಾಜಾ .. ಸದ್ಯ ಟೀಸರ್ ಮೂಲಕ ಸೌಂಡ್ ಮಾಡಲು ರೆಡಿಯಾಗಿರೋ ಸಿನಿಮಾ. ಇನ್ನು ಟೀಸರ್ ನಲ್ಲಿ 1 ನಿಮಿಷ 14 ಸೆಕೆಂಡ್ ಇರುವ ಈ ಮೋಷನ್ ಪೋಸ್ಟರ್ ನಲ್ಲಿ ಎಂಟ್ರಿಯಾಗುವ ಹೀರೋ ಎದುರಾಳಿಗಳನ್ನು ಹೊಡೆದಾಕುವ ಅವರ ಜೊತೆ ಹೊಡೆದಾಡುವ ಪರಿಯನ್ನು ತೋರಿಸಲಾಗಿದೆ.
https://www.youtube.com/watch?v=ZOJ4F_Qt6wI
ಈ ಚಿತ್ರಕ್ಕೆ ಕಥೆ ಬರೆದು ಅಶ್ವಿನ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ರಾಜ್ ಸೂರ್ಯ ಅಭಿನಯಿಸಿದ್ದು, ಆಕರ್ಷಿಕಾ ಹಾಗೂ ನಸ್ರಿನ್ ಇಬ್ಬರು ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರಕ್ಕೆ ಎಲ್ವಿನ್ ಜೋಷಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಸಂಯುಕ್ತ 2 ಖ್ಯಾತಿಯ ಪ್ರಭು ಸೂರ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದಲ್ಲದೇ ಪ್ರಮುಖ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೇಲಾಗಿ ಇವರು ರಾಜ್ ಸೂರ್ಯ ಅವರ ಸಹೋದರ. ಇನ್ನು ಪ್ರಭಾಕರನ್ ರೆಡ್ಡಿ ಹಾಗೂ ಕಿರಣ್ ರೆಡ್ಡಿ ಕೂಡಾ ಬಂಡವಾಳ ಹೂಡಿಕೆಯಲ್ಲಿ ಪ್ರಭುವಿಗೆ ಸಾಥ್ ನೀಡಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಕೋಲಾರ, ಮನಾಲಿ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮೈ ನೇಮ್ ಇಸ್ ರಾಜ್ ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು.
No Comment! Be the first one.