ಕಿರಿಕ್ ಪಾರ್ಟಿ ಚಿತ್ರಕ್ಕೆ ಒಂದು ಹಾಡು ಮತ್ತು ಸಂಭಾಷಣೆ ಬರೆದು ಆ ಮೂಲಕವೇ ಮುಂಚೂಣಿಗೆ ಬಂದಿದ್ದ ಹುಡುಗ ಧನಂಜಯ್ ರಂಜನ್. ಆ ನಂತರವೂ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದ ಧನಂಜಯ್ ಇದೀಗ `ಮೈಸೂರು ಡೈರೀಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಈಗಾಗಲೇ ಬಿಡುಗಡೆಯಾಗಿದ್ದ ಒಂದು ಪೋಸ್ಟರ್ ಮೂಲಕವೇ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕವೇ ಚಿತ್ರತಂಡ ಮತ್ತೊಂದು ಸಂತಸದ ಸುದ್ದಿಯನ್ನೂ ಜಾಹೀರು ಮಾಡಿದೆ. ಶೀಘ್ರದಲ್ಲಿಯೇ ಟ್ರೈಲರ್ ಬಿಡುಗಡೆ ಮಾಡಲು ಚಿತ್ತರ ತಂಡ ಮುಂದಾಗಿದೆ.
ಯುವ ಸಮುದಾಯದ ಕನಸು ಕನವರಿಕೆ ಮತ್ತು ಗೆಳೆತನಗಳ ಸುತ್ತಾ ಸಾಗೋ ಚೇತೋಹಾರಿ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಎಲ್ಲರ ಬದುಕಿನಲ್ಲೂ ನೆನಪಿನ ಡೈರಿಯೊಂದು ಇದ್ದೇ ಇರುತ್ತೆ. ಅಂಥಾ ನೆನಪಿನ ಬುತ್ತಿ ಬಿಚ್ಚೋ ಕಥಾ ಎಳೆಯೂ ಈ ಚಿತ್ರದ್ದೆಂಬುದು ನಿರ್ದೇಶಕರ ಸ್ಪಷ್ಟನೆ. ಕಿರಿಕ್ ಪಾರ್ಟಿ ಚಿತ್ರದ ನಂತರ ಹಲವಾರು ಚಿತ್ರಗಳಿಗೆ ಹಾಡು ಬರೆದು, ರಾಮ ರಾಮ ರೇ ಚಿತ್ರ ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದವರು ಧನಂಜಯ್ ರಂಜನ್. ಆ ಮೂಲಕ ಅಗಾಧ ಅನುಭವದೊಂದಿಗೆ ಪಳಗಿಕೊಂಡಿರೋ ಅವರು ಈ ಚಿತ್ರದ ಮೂಲಕ ಹೊಸಾ ಅಲೆಯೆಬ್ಬಿಸೋ ಹುಮ್ಮಸ್ಸಿನೊಂದಿಗೆ ಹೊರಟಿದ್ದಾರೆ. ಪತ್ರಿಕಾ ಪ್ರಚಾರಕರ್ತರಾಗಿದ್ದುಕೊಂಡು ನಿರ್ಮಾಣದತ್ತ ವಾಲಿದ ದೀಪಕ್ ಕೃಷ್ಣ ಅವರ ಪತ್ನಿ ಅಕ್ಷತಾ ದೀಪಕ್ ಮತ್ತು ಶ್ರೀಮತಿ ಸುನಂದಾ ಕೃಷ್ಣಪ್ಪ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
#
No Comment! Be the first one.