ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಆಗಮಿಸುತ್ತಿದ್ದಾರೆ. ತನ್ನ ತಂದೆಯವರಂತೆ ತಾನೂ ವಿಷ್ಣುವರ್ಧನ್ ಅಭಿಮಾನಿಯಾಗಿರೋ ಶ್ರೇಯಸ್ ಇದೀಗ ಜ್ಯೂನಿಯರ್ ರಾಮಾಚಾರಿಯ ಗೆಟಪ್ಪಿನಲ್ಲಿ ಮಿಂಚಿದ್ದಾರೆ. ವಿಷ್ಣು ದಾದಾಗೆ ಅರ್ಪಿಸಲಾಗಿರೋ ಪಡ್ಡೆಹುಲಿಯ ಎಂಟ್ರಿ ಸಾಂಗ್ ಇದೀಗ ಪಿಆರ್ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ನಾ ತುಂಬಾ ಹೊಸಬ ಬಾಸು ಎಂಬ ಈ ಹಾಡು ವಿಷ್ಣು ಮೊದಲ ಚಿತ್ರ ನಾಗರ ಹಾವು ವಿಶೇಷತೆಗಳನ್ನೊಳಗೊಂಡು ಸಾಹಸ ಸಿಂಹನ ಅಭಿಮಾನಿಗಳ ಮನಗೆದ್ದಿದೆ. ಕೆ ಮಂಜು ಮೊನ್ನೆ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳಿಗಾಗಿಯೇ ಈ ಹಾಡಿನ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಅದನ್ನು ನೋಡಿದ ಅಭಿಮಾನಿಗಳೆಲ್ಲ ಥ್ರಿಲ್ ಆಗಿದ್ದಾರೆ.
ಈ ಹಾಡೀಗ ಪೆಆರ್ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಅದ್ದೂರಿ ಓಪನಿಂಗ್ ಕೂಡಾ ಸಿಕ್ಕಿದೆ. ಈ ಹಿಂದೆ ಒಂದು ಹಾಡಿನಲ್ಲಿ ಶ್ರೇಯಸ್ ಥೇಟು ವಿಷ್ಣು ಅಪರಾವತಾರದಂತೆ ಕಾಣಿಸಿಕೊಂಡಿದ್ದರು. ಈ ಹಾಡು ಕೂಡಾ ಅದರಷ್ಟೇ ಮೋಹಕವಾಗಿ ಮೂಡಿ ಬಂದಿದೆ. ಪಡ್ಡೆಹುಲಿ ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನದ ಚಿತ್ರ. ಆರಂಭದಿಂದ ಈ ವರೆಗೂ ಥರ ಥರದಲ್ಲಿ ಕ್ಯೂರಿಯಾಸಿಟಿಗೆ ಕಾರಣವಾಗುತ್ತಿರೋ ಈ ಸಿನಿಮಾವೀಗ ಹಾಡುಗಳ ಮೂಲಕ ಹೊಸಾ ತರಂಗಗಳನ್ನೆಬ್ಬಿಸುತ್ತಿದೆ.
#
No Comment! Be the first one.