ಸೌತ್ ಇಂಡಿಯನ್ ಆ್ಯಕ್ಟರ್ ಅಸೋಸಿಯೇಷನ್ ನಾಡಿಗರ್ ಸಂಗಮ್ ನ ಚುನಾವಣೆ ಸದ್ಯದಲ್ಲೇ ಘೋಷಣೆಯಾಗಲಿದೆ. ನಿವೃತ್ತ ನ್ಯಾಯಾಧೀಶರು ಈ ಚುನಾವಣೆಯ ನಿಭಾಯಿಸಲಿದ್ದಾರೆ. ಅಲ್ಲದೇ ಪ್ರೊಡ್ಯೂಜರ್ ಕೌನ್ಸಿಲ್ ನ ಚುನಾವಣೆಯೂ ಸಹ ಸದ್ಯದಲ್ಲೇ ಘೋಷಣೆಯಾಗಲಿದೆ. ಇಂತಹ ಸಂದರ್ಭದಲ್ಲಿ ಸೌತ್ ಇಂಡಿಯನ್ ಆ್ಯಕ್ಟರ್ ಅಸೋಸಿಯೇಷನ್ ನ ಪ್ರಸ್ತುತ ಅಧ್ಯಕ್ಷರಾಗಿರುವ ನಟ ನಾಸಿರ್ ರವರು ಇತ್ತೀಚಿಗೆ ಸಭೆಯೊಂದನ್ನು ಕರೆದು, ಮುಂಬರುವ ಚುನಾವಣೆಯಲ್ಲಿಯೂ ತಾನು ಸ್ಪರ್ಧಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಪೂಚಿ ಮುರುಗನ್ ರವರು ಉಪಾಧ್ಯಕ್ಷನ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.
ಅಲ್ಲದೇ ಮಾತನಾಡಿ ಕ್ರಮವಾಗಿ ಕಾರ್ಯದರ್ಶಿ ಮತ್ತು ಖಜಾಂಜಿಯ ಸ್ಥಾನದಲ್ಲಿರುವ ವಿಶಾಲ್ ಮತ್ತು ಕಾರ್ತಿ ಕುರಿತಾಗಿಯೂ ನಾಸಿರ್ ಮಾತನಾಡಿ, ಅವರು ಸಹ ಚುನಾವಣೆಯಲ್ಲಿ ಅದೇ ಸ್ಥಾನಗಳಿಗೆ ಸ್ಪರ್ಧಿಸಲಿದ್ದಾರೆಂದು ಘೋಷಿಸಿ, ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇನ್ನು ಇವರ ಎದುರಾಳಿಯಾಗಿ ಕಳೆದ ವರ್ಷ ಸ್ಪರ್ಧೆ ಮಾಡಿದ್ದು, ರಾಧಾ ರವಿ ಮತ್ತು ಶರತ್ ಕುಮಾರ್ ರವರು ಸ್ಪರ್ಧಿಸಲಿದ್ದಾರೆ. ಸದ್ಯ ಕೇಸೊಂದರಲ್ಲಿ ತಗುಲಿಕೊಳ್ಳುವ ಸಾಧ್ಯತೆಯಲ್ಲಿರುವ ರಾಧಾರವಿ ಮತ್ತು ಶರತ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸುವರೋ ನೋಡಬೇಕು.
No Comment! Be the first one.