ವಯಸ್ಸು ಅರವತ್ತಾದರೂ ರೊಮ್ಯಾನ್ಸಿನಲ್ಲಿ ಹಿಂದೆ ಬೀಳದ ಟಾಲಿವುಡ್ ನ ರಿಯಲ್ ಮನ್ಮಥ ಅಕ್ಕಿನೇನಿ ನಾಗಾರ್ಜುನ್. ಅದನ್ನು ಇತ್ತೀಚಿಗೆ ಬಿಡುಗಡೆಗೊಂಡ ಮನ್ಮಥುಡು 2 ಚಿತ್ರದಲ್ಲಿ ಪ್ರಾಕ್ಟಿಕಲ್ ಆಗಿಯೇ ಪ್ರೂವ್ ಮಾಡಿದ್ದಾರೆ. ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಮನ್ಮಥುಡು 2 ಬಾಕ್ಸ್ ಆಫೀಸಿನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿದ್ದು, ನಾಗಾರ್ಜುನರ ಸ್ಟೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲಿನಿಂದಲೂ ನಾಗಾರ್ಜುನರ ಮನ್ಮಥನ ಅವತಾರವನ್ನು ನಾಗ್ ಅಭಿಮಾನಿಗಳು ಮೆಚ್ಚಿ ಹೊಗಳಿದ್ದರು. ಆದರೆ ಮನ್ಮಥುಡು 2 ಚಿತ್ರದ ನಾಗಾರ್ಜುನ್ ರೊಮ್ಯಾನ್ಸ್ ನ್ನು ಅಭಿಮಾನಿಗಳು ಹಾಡಿ ಹೊಗಳಿದ್ದರೂ ಸಹ ನಾಗಾರ್ಜುನರ ಹೆಂಡತಿ ಮತ್ತು ಸೊಸೆ ಕಮ್ ನಟಿ ಸಮಂತಾಗೆ ಮಾವನ ಮನ್ಮಥ ಲೀಲೆಯಿಂದೆ ಕೊಂಚ ಇರಿಸುಮುರುಸಾಗಿದೆಯಂತೆ.
ಯೆಸ್.. ನಾಗಾರ್ಜುನ ಈ ವಯಸ್ಸಿನಲ್ಲಿ ‘ಮನ್ಮಥುಡು 2’ ಚಿತ್ರದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೊಸೆ ಸಮಂತಾಗೆ ಕೊಂಚವೂ ಇಷ್ಟವಾಗಿಲ್ಲವಂತೆ. ಈ ಬಗ್ಗೆ ಸಿನಿಮಾ ಮಾಡುವ ಮೊದಲೇ ಕತೆ ಕೇಳಿದಾಗಲೇ ಸಮಂತಾ ಹೇಳಿಕೊಂಡಿದ್ದರಂತೆ. ಆದರೆ ಅದು ಸಮಂತಾ ತಮಾಷೆ ಮಾಡುತ್ತಿದ್ದಾರೆಂದು ಅಂದುಕೊಳ್ಳಲಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾದ ನಂತರವೂ ಸಮಂತಾ ಚಿತ್ರದ ಪ್ರೀಮಿಯರ್ ಶೋ ಹಾಗೂ ಪ್ರಚಾರದ ಸುದ್ದಿಗೋಷ್ಠಿಗಳಿಂದ ದೂರ ಉಳಿದಿದ್ದಾರೆ. ಇದಾದ ನಂತರವೇ ನಾಗಾರ್ಜುನ ಅವರಿಗೆ ಸತ್ಯದ ಅರಿವಾಗಿದೆ ಎನ್ನಲಾಗುತ್ತಿದೆ.
ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ ಆದರೂ ಎಲ್ಲೂ ಈ ಚಿತ್ರದ ಬಗ್ಗೆ ಸಮಂತಾ ಒಂದು ಮಾತೂ ಆಡಿಲ್ಲ. ಅಲ್ಲದೆ ನಾಗಾರ್ಜುನ ಸದ್ಯ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲಿದ್ದು, ಅದರ ಕತೆಯೂ ಹೀಗೆ ಇರುವ ಕಾರಣಕ್ಕೆ ಸಮಂತಾ ಕೋಪಗೊಂಡಿದ್ದಾರಂತೆ. ನಾಗಾರ್ಜುನ ಅವರ ‘ಬಂಗಾರರಾಜು ಕಥಾ’ ಸಿನಿಮಾದಲ್ಲೂ ನಾಗ್ ಮತ್ತೆ ಸಿಕ್ಕಾಪಟ್ಟೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಂಗಾರರಾಜು ಕಥಾ’ ಸಿನಿಮಾದಲ್ಲಿ ನಾಗಚೈತನ್ಯ ಸಹ ಅಭಿನಯಿಸುತ್ತಿದ್ದು, ಅವರ ಪಾತ್ರವೂ ಹಾಗೆಯೇ ಇರಲಿದೆಯಂತೆ. ಅದಕ್ಕೆ ಸ್ಯಾಮ್ ಸದ್ಯ ಕೆಲವು ಷರತ್ತುಗಳನ್ನು ಇಟ್ಟಿದ್ದು, ಅದಕ್ಕೆ ಒಪ್ಪಿ, ಕತೆಯಲ್ಲಿ ಬದಲಾವಣೆ ಮಾಡಿದರೆ ಮಾತ್ರ ಚೈತನ್ಯ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ.
No Comment! Be the first one.