ಅಮರ್ ಸಿನಿಮಾದ ಫ್ಲಾಪ್ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಹೌದು ನಿರ್ದೇಶಕ ನಾಗಶೇಖರ್ ಸಂಜಯ್ ಅಲಿಯಾಸ್ ಸಂಜು ಎಂಬ ಟೈಟಲ್ ನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದೊಂದು ಸತ್ಯಘಟನೆಯನ್ನಾದರಿಸಿದ ಸಿನಿಮಾವಾಗಿದ್ದು, ಚಿತ್ರದ ಪೋಸ್ಟರ್ ನ್ನು ಸಹ ನಾಗಶೇಖರ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ರಿಲೀಸ್ ಮಾಡಿದ್ದಾರೆ. ಆ ಪೋಸ್ಟರ್ ನಲ್ಲಿ ಪಾರಿವಾಳ, ರಕ್ತದ ಮಾರ್ಕು, ಹೃದಯದ ಸಿಂಬಲ್ಲನ್ನೂ ಕಾಣಬಹುದಾಗಿದ್ದು, ಕ್ರೈಮ್ ಕಮ್ ಲವ್ ಸಿನಿಮಾ ಎಂಬುದಷ್ಟೇ ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನುಳಿದಂತೆ ಸಿನಿಮಾ ಕುರಿತಾಗಿ ಮತ್ತೇನನ್ನೂ ಹೇಳಿಕೊಳ್ಳದ ನಾಗಶೇಖರ್ ಮಿಕ್ಕ ವಿಚಾರವನ್ನು ಸದ್ಯದಲ್ಲೇ ತಿಳಿಸಲಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಹಾಗೂ ರವಿ ವರ್ಮ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ನಾಗಶೇಖರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಲಾಂಚಿಂಗ್ ಸಿನಿಮಾ ಅಮರ್ ನ್ನು ನಿರ್ದೇಶಿಸಿದ್ದರು. ಇತ್ತೀಚಿಗೆ ಅದು ರಿಲೀಸ್ ಕೂಡ ಆಗಿತ್ತು. ಸಪ್ಪೆ ಸ್ಕ್ರೀನ್ ಪ್ಲೇ, ಹಾಗೂ ಅಭಿಷೇಕ್ ಮಾಸ್ ಲುಕ್ಕು, ಖಡಕ್ ಡೈಲಾಗಿಗೆ ಮ್ಯಾಚ್ ಆಗದ ಪಾತ್ರ ನೀಡಿ ಲಾಂಚಿಂಗ್ ಸಿನಿಮಾದಲ್ಲಿಯೇ ಮಕಾಡೆ ಮಲಗುವಂತೆ ಮಾಡಿದ ಅವಮಾನದಲ್ಲಿ ನಾಗಶೇಖರ್ ಇದ್ದಾರೆ. ಅಲ್ಲದೇ ಸಿನಿಮಾ ಬಗೆಗಿನ ರಿವ್ಯೂಗಳನ್ನು ಗಮನಿಸಿದ್ದ ಅವರು ಮಾಧ್ಯಮದವರ ಮೇಲೆ ಅಸಮಧಾನವನ್ನು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿರುವ ನಾಗಶೇಖರ್ ಆ ಸಿನಿಮಾವನ್ನಾದರೂ ಅಚ್ಚುಕಟ್ಟಾಗಿ ನಿರ್ದೇಶಿಸುವಂತಾಗಲಿ.

CG ARUN

ಕೋಟಿಗೆಲ್ಲೋ ಆಟಕ್ಕೆ ಮುಹೂರ್ತ!

Previous article

ರಿಲೀಸ್ ಗೂ ಮುನ್ನವೇ ಟ್ರೆಂಡಿಂಗ್ ಸೃಷ್ಟಿಸಿದ ರಾಂಧವ ಟೈಟಲ್ ಟ್ರ್ಯಾಕ್!

Next article

You may also like

Comments

Leave a reply

Your email address will not be published. Required fields are marked *