ಕಳೆದೆರಡು ದಶಕದಿಂದೀಚೆಯ ಕನ್ನಡದ ಚೆಂದದ ಚಿತ್ರಗೀತೆಗಳನ್ನು ಪಟ್ಟಿ ಮಾಡಲು ಕೂತರೆ ಅದರಲ್ಲಿ ಖಂಡಿತವಾಗಿಯೂ ವಿ. ನಾಗೇಂದ್ರ ಪ್ರಸಾದ್ ಮೊದಲಿಗರಾಗಿ ನಿಲ್ಲುತ್ತಾರೆ. ನಟರಾಗಿ, ನಿರ್ದೇಶಕರಾಗಿ, ಗೀತರಚನೆಕಾರರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ನಾಗೇಂದ್ರ ಪ್ರಸಾದ್  ಏನಾದರೊಂದು ಹೊಸತನದ ಹುಟುಕಾಟದಲ್ಲಿರುತ್ತಾರೆ. ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತಾರೆ. ಈ ಕಾರಣಕ್ಕೇ ಇರಬೇಕು ಇವತ್ತಿಗೂ ಕವಿರತ್ನರ ‘ಲೇಖನಿ’ಯಲ್ಲಿ ಮೂಡಿದ ಯಾವುದೇ ಸಾಲು ಹೊಸದೆನಿಸುವುದು; ಮನಸಿಗೆ ಆಪ್ತವಾಗುವುದು. ಹಂಸಲೇಖಾರಂತ ಸಿನಿಮಾ ಸಾಹಿತ್ಯದ ದಿಗ್ಗಜ ಕೂಡಾ ‘ನಾಗೇಂದ್ರ ಪ್ರಸಾದ್ ನನ್ನ ಉತ್ತರಾಧಿಕಾರಿ’ಅಂತಾ ಯಾವತ್ತೋ ಒಪ್ಪಿಕೊಂಡಿದ್ದಾಗಿದೆ. ಕನ್ನಡದ ಸಿನಿಮಾ ವಲಯ ಪ್ರೀತಿಯಿಂದ ‘ಗುರೂಜಿ’ ಎನ್ನುವ ಪಟ್ಟದಲ್ಲಿ ಕೂರಿಸಿದ್ದಾರೆ. ಪ್ರಾಕಾರ ಯಾವುದೇ ಆದರೂ ಅದನ್ನು ಜನಮೆಚ್ಚುವಂತೆ ಬರೆಯೋದು ನಾಗೇಂದ್ರ ಪ್ರಸಾದ್ ಶೈಲಿ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಅವರೀಗ ನಟನೆಯಲ್ಲಿಯೂ ಗಮನ ಸೆಳೆಯುತ್ತಿದ್ದಾರೆ.

ಹೀಗೆ ಸದಾ ಕಾಡುವ ಹಾಡುಗಳ ಮೂಲಕವೇ ಪ್ರಸಿದ್ಧಿ ಪಡೆದಿರೋ ವಿ.ನಾಗೇಂದ್ರ ಪ್ರಸಾದ್ ಅವರು ಅಮ್ಮನ ದಿನಕ್ಕಾಗಿ ಚೆಂದದ ಹಾಡೊಂದನ್ನು ಬರೆದಿದ್ದಾರೆ. ಎ-2 ಮ್ಯೂಸಿಕ್ ಹೊರತಂದಿರುವ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನದಲ್ಲಿ ರೂಪುಗೊಂಡಿರುವ ಹಾಡಿನ ಲಿರಿಕಲ್ ವಿಡಿಯೋ ಇದೀಗ ಯೂಟ್ಯೂಬಿನಲ್ಲಿ ರಿಲೀಸಾಗಿದೆ. ‘ಅಮ್ಮನ ಭಿಕ್ಷೆ ನಾನು – ಹೆಸರಿನ ಹಾಡಿನಲ್ಲಿ ತಾಯಿ ಕಣೋ ನಿನ್ನ ತಾಯಿ ಕಣೋ ಜೀವನದಾ ವರದಾನ… ತಾಯೆಂದರೆ ಹೆತ್ತ ತಾಯೆಂದರೆ ದೇವರಿಗೂ ಅಭಿಮಾನ…’ ಎಂಬ ಆತ್ಮಬಂಧದ ನುಡಿಗಳಿಗೆ ಕವಿಗಳು ಜೀವ ನೀಡಿದ್ದಾರೆ. ಇವರೇ ಬರೆದಿದ್ದ ಅಪ್ಪಾ ಐ ಲವ್ ಯೂ ಪಾ ಮತ್ತು ಗೂಗಲ್ ಚಿತ್ರದ ಜೋ ಲಾಲಿ ಹಾಡಿಗೆ ಸರಿಗಟ್ಟುವಂತಾ ಕಾಡುವ ಸಾಲುಗಳು ಇಲ್ಲಿವೆ… ಮಿಸ್ ಮಾಡದೇ ನೋಡಿ, ಕೇಳಿ – ಇದು ಅಮ್ಮನ ಭಿಕ್ಷೆ!

 

 

CG ARUN

ಹಾಲುಂಡ ತವರಿನ ಮಗಳು ಸೊಸೆಯಾಗಲಿಲ್ಲ!

Previous article

You may also like

Comments

Leave a reply

Your email address will not be published. Required fields are marked *