ತಮಿಳಿನಲ್ಲಿ `ಅರ್ರರ್ರೆ ನಾಕುಮುಖ’ ಅನ್ನೋ ಹಾಡನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಕೇಳಿರುತ್ತೇವೆ. ಜತೆಗೆ ಕುಣಿಯುವ ಮೂಡಿಗೆ ಹೋಗಿರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಆ ಹಾಡಿನಲ್ಲಿ ಬಳಕೆಯಾಗಿದ್ದ ನಾಕುಮುಖ ಎನ್ನುವ ಪದವನ್ನೇ ಟೈಟಲ್ಲಾಗಿಟ್ಟುಕೊಂಡು ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಚಿತ್ರದ ಹಾಡೊಂದನ್ನು ಬೆಂಗಳೂರು ಪಶ್ಚಿಮ ವಲಯದ ಡಿ.ಸಿ.ಪಿ ರವಿ ಡಿ ಚೆನ್ನಣ್ಣನವರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಚಿತ್ರದಲ್ಲಿ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ನಿಗೂಢವಾಗಿ ಕೊಲೆಯಾಗುತ್ತಾಳೆ. ರೇಪ್ ಮಾಡಿದವರ ಪೈಕಿ ಎಲ್ಲರೂ ಸರತಿ ಸಾಲಿನಲ್ಲಿ ಕೊಲೆಯಾಗುತ್ತಾ ಹೋಗುತ್ತಾರೆ. ಆ ಅತ್ಯಾಚಾರಿಗಳನ್ನು ಯಾರು ಕೊಲೆ ಮಾಡುತ್ತಾರೆ. ಎಂಬುದೇ ನಾಕುಮುಖದ ಎಳೆಯಾಗಿದೆ. ಸಂದೇಶಾತ್ಮಕವಾಗಿ ಸಿನಿಮಾವನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಾಕುಮುಖ ಸಿನಿಮಾವನ್ನು ಕುಶಾನ್ ಗೌಡ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ರಿಲೀಸ್ ಆಗಿರುವ ಈ ಹಾಡನ್ನು ಅವರೇ ರಚಿಸಿರುವುದು ವಿಶೇಷ. ಆರ್ ರವಿ ಬಾಬು ಸಂಗೀತ ಸಂಯೋಜನೆ ಮಾಡಿ ಸ್ವತಃ ಅವರೇ ಹಾಡಿದ್ದಾರೆ. ಚಿತ್ರದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಬಲ ರಾಜ್ವಾಡಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ, ಅಶ್ವಿನ್ ಷರೀಫ್ ಸೇರಿದಂತೆ ಅನೇಕರು ನಟಿಸಿದ್ದಾರೆ.

 

 

 

CG ARUN

ಮಗಳಿಗೆ ಇಂಡಿಯಾ ರೋಸ್ ಎಂದು ಹೆಸರಿಟ್ಟ ವಿದೇಶಿ ನಟ!

Previous article

ವಿಕ್ರಂ ರವಿಚಂದ್ರನ್ ಚಿತ್ರಕ್ಕೆ ನಾಯಕಿ ಹುಡುಕಾಟ!

Next article

You may also like

Comments

Leave a reply

Your email address will not be published. Required fields are marked *