ಆರಂಭದಿಂದಲೂ ವೈವಿಧ್ಯಮಯ ಪೋಸ್ಟರ್ ಗಳ ಮೂಲಕವೇ ಹವಾ ಸೃಷ್ಟಿಸುತ್ತಾ ಬಂದಿದ್ದ ಕ್ರೈಂ ಮತ್ತು ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ ಸದ್ಯ ಟ್ರೇಲರ್ ಮೂಲಕವೂ ಸಖತ್ ಸೌಂಡು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಿಂದಲೂ ಟೀ ಅಂಗಡಿಯ ಹರಟೆಯಲ್ಲಿಯೂ ನನ್ನ ಪ್ರಕಾರ ಚಿತ್ರದ ಕುರಿತಾಗಿಯೇ ಸದಭಿಪ್ರಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿರುವ ನನ್ನ ಪ್ರಕಾರ ಈ ವಾರ ಬಿಡುಗಡೆಯಾಗಲಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟರಮಟ್ಟಿಗೆ ಹವಾ ಸೃಷ್ಟಿಸಿರುವ ಸಾಕಷ್ಟು ಸಿನಿಮಾಗಳೆಲ್ಲವೂ ಆದಾಯ, ಕೀರ್ತಿಯ ದೃಷ್ಟಿಯಿಂದ ಗೆಲುವು ಸಾಧಿಸಿದೆ. ಬೇರೆ ಸಿನಿಮಾಗಳಂತೆ ನನ್ನ ಪ್ರಕಾರ ಚಿತ್ರತಂಡ ಪ್ರೊಮೋಷನ್ ಗಾಗಿ ಯಾವುದೇ ತಳುಕು ಬಳುಕಿನ ಮೊರೆ ಹೋಗದೇ ಯಾವ ಕೆಲಸವನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಬೇಕೆಂಬ ರಹಸ್ಯವನ್ನು ಕರಗತ ಮಾಡಿಕೊಂಡು ಮುಂದುವರೆಯುತ್ತಾ ಬಂದಿರೋದೇ ನನ್ನ ಪ್ರಕಾರ ಸಕ್ಸಸ್ ಗೆ ಮೇನ್ ರೀಜನ್ ಕೂಡ. ಎಲ್ಲ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ನನ್ನ ಪ್ರಕಾರ ಚಿತ್ರವು ಎಲ್ಲರ ಮನತಣಿಸುವ ಅಸ್ತ್ರವಾಗಲಿದೆ ಎಂಬುದು ನಿರ್ದೇಶಕ ವಿನಯ್ ಬಾಲಾಜಿಯವರ ಅಂಬೋಣ.
ಕಿಶೋರ್ ಹಾಗೂ ಪ್ರಿಯಾಮಣಿ ಕಾಂಬಿನೇಷನ್ನಿನಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕೃಷ್ಣಲೀಲಾ ಮಯೂರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಕಿಶೋರ್ ಪೊಲೀಸ್ ಕಾಪ್ ಆಗಿ ಕಾಣಿಸಿಕೊಂಡಿದ್ದರೆ, ಪ್ರಿಯಾಮಣಿ ವೈದ್ಯೆಯಾಗಿ ಕಿಶೋರ್ ಗೆ ಸಾಥ್ ನೀಡಿದ್ದಾರೆ. ಒಂದು ಕೊಲೆಯನ್ನು ಭೇದಿಸುವ ಸುತ್ತ ಸಾಗುವ ನನ್ನ ಪ್ರಕಾರವನ್ನು ಜಿವಿಕೆ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ. ಉಳಿದಂತೆ ಮನೋಹರ್ ಜೋಶಿ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಮತ್ತು ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ, ಮದನ್ ಹರಿಣಿ ಮತ್ತು ನಾಗಿ ನೃತ್ಯ ಸಂಯೋಜನೆ, ಅರ್ಜುನ್ ರಾಮು ಸಂಗೀತ ಈ ಚಿತ್ರಕ್ಕಿದೆ.