ಕೃಷ್ಣಸುಂದರಿ ಪ್ರಿಯಾಮಣಿ ಮತ್ತು ಕಿಶೋರ್ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕಂಪ್ಲೀಟ್ ಮಾಡಿಕೊಂಡಿರುವ ಈ ಸಿನಿಮಾ ಇತ್ತೀಚಿಗೆ ಸೆನ್ಸಾರ್ ವೀಕ್ಷಣೆಗೆಂದು ತೆರಳಿತ್ತು. ಯಾವುದೇ ಕಟ್ಟು ಮ್ಯೂಟಿಲ್ಲದೇ ಯು/ಎ ಪ್ರಮಾಣ ಪತ್ರವನ್ನು ಪಡೆದಿದೆ. ಹಾಗೂ ಇತ್ತೀಚಿಗೆ ನೋಡಿದ ಕೌಟುಂಬಿಕ ಚಿತ್ರಗಳಲ್ಲಿ ಒಂದು ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಈ ಚಿತ್ರವನ್ನು ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ವಿನಯ್ ಬಾಲಜಿ ಕಥೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇನ್ನು ಹುಲಿರಾಯ ಖ್ಯಾತಿಯ ಅರ್ಜುನ್ ರಾಮು ಸಂಗೀತ ಸಂಯೋಜನೆ, ಮನ್ವರ್ಷಿ, ವಿನಯ್ ಬಾಲಾಜಿ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ, ಈ ಚಿತ್ರಕ್ಕಿದೆ. ಕಿಶೋರ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಕೃಷ್ಣಲೀಲಾ ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದ ತಾರಾಬಳಗವಿದೆ.
No Comment! Be the first one.