ಬದುಕಿನಲ್ಲಿ ಸಂಭವಿಸುವ, ನಮ್ಮ ಕಣ್ಣಿಗೆ ಎದುರಾಗುವ ಸಣ್ಣ ಘಟನೆಯೊಂದು ಒಂದು ದೊಡ್ಡ ಸಿನಿಮಾ ಆಗಿ ರೂಪುಗೊಳ್ಳಬಹುದು ಅನ್ನೋದಕ್ಕೆ ‘ನನ್ನ ಪ್ರಕಾರ’ ಅನ್ನೋ ಸಿನಿಮಾ ರೂಪುಗೊಂಡು, ಬಿಡುಗಡೆಯಾಗಿ, ಗೆದ್ದು ಸಾಕ್ಷಿಯಾಗಿ ನಿಂತಿದೆ.
ಈ ಚಿತ್ರದ ನಿರ್ದೇಶಕ ವಿನಯ್ ಹಿಂದೆ ಶಾರ್ಟ್ ಮೂವಿಗಳನ್ನು ನಿರ್ದೇಶಿಸುತ್ತಿದ್ದವರು. ಹಾಗೆ ಕಿರುಚಿತ್ರವನ್ನು ರೂಪಿಸುವ ಹೊತ್ತಿನಲ್ಲೇ ತಮ್ಮೆದುರು ನಡೆ ವಿಚಾರವನ್ನಿಟ್ಟುಕೊಂಡು ಮತ್ತೊಂದು ಕಿರುಚಿತ್ರಕ್ಕೆ ಕತೆ ಬರೆಯಲು ಕೂತಿದ್ದರು ನಿರ್ದೇಶಕ ವಿನಯ್. ಬರೆಯುತ್ತಾ ಬರೆಯುತ್ತಾ ಅದು ದೊಡ್ಡದಾಗುತ್ತಾ ಹೋಗಿತ್ತು. ಇದನ್ನು ಶಾರ್ಟ್ ಸಿನಿಮಾವನ್ನಾಗಿ ಮಾಡಿದರೆ ಹೆಚ್ಚು ಜನಕ್ಕೆ ರೀಚ್ ಆಗೋದಿಲ್ಲ. ಇದು ಬೆಳ್ಳಿತೆರೆಯಲ್ಲಷ್ಟೇ ಮೂಡಬೇಕು ಅನ್ನೋ ತೀರ್ಮಾನಕ್ಕೆ ಬಂದಿದ್ದರು ವಿನಯ್. ಚೆನ್ನೈನಲ್ಲಿರುವ ಸೌತ್ ಇಂಡಿಯನ್ ರೈಟರಸ್ ಅಸೋಸಿಯೇಷನ್ನಿನಲ್ಲಿ ಬರೆದ ಕಥೆಯನ್ನು ರಿಜಿಸ್ಟರ್ ಮಾಡಿಸಿದ್ದರು. ಒಂದಲ್ಲಾ ಮೂರು ಬಾರಿ ಕಥೆ ಕೇಳಿದ ನಿರ್ಮಾಪಕರು ನಿರ್ಮಾಪಕರು ಸಿನಿಮಾವನ್ನಾಗಿ ರೂಪಿಸಿದರು.
ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್ರಾಮು ಸಂಗೀತ ಸಂಯೋಜನೆ ಮಾಡಿದ್ದರು. ಮನ್ವರ್ಷಿ, ವಿನಯ್ಬಾಲಾಜಿ, ಅವರ ಸಂಭಾಷಣೆ ಬರೆದರೆ, ಮನೋಹರ್ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ ಡಿಫ಼ರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ – ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವಿನೋದ್ ರಾವ್ ಅವರ ಕಲಾ ನಿರ್ದೇಶನವಿದ್ದ ಈ ಚಿತ್ರದ ಹಾಡುಗಳನ್ನು ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಬರೆದಿದ್ದಾರೆ. ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಮತ್ತಿತರರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಿಶೋರ್, ಪ್ರಿಯಾಮಣಿ ಮತ್ತು ಮಯೂರಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ನೋಡಿದ ಪ್ರತಿಯೊಬ್ಬರೂ ಈ ಚಿತ್ರವನ್ನು ಮೆಚ್ಚಿದ್ದಾರೆ. ಈ ಸಿನಿಮಾ ಬಿಡುಗಡೆಯ ಮುಂದಿನವಾರಕ್ಕೇ ಸಾಹೋ ಎನ್ನುವ ಪರಭಾಷೆಯ ಸಿನಿಮಾವೊಂದು ಅಪ್ಪಳಿಸಿತ್ತು. ಅದರ ಅಬ್ಬರವನ್ನು ಎದುರಿಸಿ, ಆ ತೆಲುಗು ಚಿತ್ರವನ್ನು ಮಣಿಸಿ ಮುಂದೆ ಸಾಗಿದ ನನ್ನ ಪ್ರಕಾರ ಇವತ್ತು ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಧಾಟಿಕೊಂಡಿದೆ.