ಶಿವರಾಜ್ ಕೆ.ಆರ್. ಪೇಟೆ ಹಾಗೂ ಸಿಂಬ ನಾಯಿ ಕಾಂಬಿನೇಷನ್ನಿನ ಹೊಸ ಸಿನಿಮಾ ನಾನು ಮತ್ತು ಗುಂಡ. ನಾಯಕ ಮತ್ತು ನಾಯಿಯ ಭಾವನೆಗಳ ಸುತ್ತವೇ ಸಾಗುವ ಈ ಸಿನಿಮಾ ಸೆಂಟಿಮೆಂಟ್ ಅಂಶಗಳ ಜತೆಗೆ ತಮಾಷೆಯಾಗಿಯೂ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬುದು ಮೊದಲ ಟೀಸರ್ ನಲ್ಲಿಯೇ ಸಾಬೀತಾಗಿದೆ. ರಿಲೀಸ್ ಗೆ ರೆಡಿಯಾಗಿರುವ ನಾನು ಮತ್ತು ಗುಂಡ ಸದ್ಯ ಮತ್ತೊಂದು ಟೀಸರನ್ನು ಬಿಡುಗಡೆ ಮಾಡಿಕೊಂಡಿದೆ.
ಟೀಸರ್ ನಲ್ಲಿ ನಾಯಕನು ತನ್ನ ಹೆಂಡತಿಯ ಬಲವಂತಕ್ಕೋ ಮತ್ತಿನ್ಯಾವ ಕಾರಣಕ್ಕೋ ದೂರ ಬಿಟ್ಟು ಬಿಡುವ ಯೋಜನೆ ಹಾಕಿಕೊಳ್ಳುತ್ತಾನೆ. ಆದರೆ ನಾಯಿಯನ್ನು ಬಿಟ್ಟು ಬಂದರೂ ಆ ನಾಯಿ ನಾಯಕನನ್ನು ಬಿಡದೇ ಅವನ ಜತೆಗೆ ಇರಲು ಬಯಸುತ್ತದೆ. ಚಳಿಯಲ್ಲಿ ಕುಳಿತಿರುವಾಗ ಡ್ರಿಂಕ್ಸ್ ಬಾಟಲ್ ತಂದು ಕೊಡುವುದು ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಒಟ್ಟಿನಲ್ಲಿ ನಾಯಿ ಮತ್ತು ನಾಯಕನ ನಡುವಿನ ಮಜಬೂತ್ ಜೋಡಿ ಈ ಚಿತ್ರದಲ್ಲಿ ನೋಡಬಹುದು. ಇನ್ನು ನಾಯಕ ಶಿವರಾಜ್ ಕೆ.ಆರ್. ಪೇಟೆಗೆ ನಾಯಕಿಯಾಗಿ ಸಂಯುಕ್ತ ಹೊರನಾಡು ಜೋಡಿಯಾಗಿದ್ದಾರೆ. ಇನ್ನು ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿರುವ ನಾನು ಮತ್ತು ಗುಂಡ ಸಿನಿಮಾಕ್ಕೆ ರಘು ಹಾಸನ್ ಬಂಡವಾಳ ಹೂಡಿದ್ದಾರೆ.
No Comment! Be the first one.