ಕನ್ನಡದಲ್ಲಿ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮಾಳವಿಕಾ ಮೋಹನ್ ಅವರನ್ನು ಟ್ರೋಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಮಾಳವಿಕ ಮೋಹನ್ ತುಂಡು ಉಡುಗೆಯಲ್ಲಿ ಪೊಟೋ ಶೂಟ್ ಮಾಡಿಸಿಕೊಂಡಿದ್ದು, ಪೋಟೋಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡಿದ್ದು, ಈ ರೀತಿಯ ಬಟ್ಟೆಗಳು ನಿಮಗೆ ಕಂಪರ್ಟೆಬಲ್ ಆಗಿ ಇರಬಹುದು ಸಮಾಜಕಲ್ಲ. ಈ ರೀತಿಯ ಬಟ್ಟೆಗಳಿಂದ ತುಂಬಾ ಅಡ್ಡ ಪರಿಣಾಮಗಳು ಆಗುತ್ತವೆ. ಗುಹ್ಯ ಮತ್ತು ಬ್ಯಾಕ್ಟೀರಿಯಾದಂತಹ ಕಾಯಿಲೆಗಳು ಬರುತ್ತವೆ ಇತ್ಯಾದಿ ಟೀಕೆಗಳು ಬಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಳವಿಕಾ, ಓರ್ವ ಗೌರವಾನ್ವಿತ ಹುಡುಗಿ ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬ ವಿಚಾರವಾಗಿ ಬಹಳಷ್ಟು ಕಾಮೆಂಟ್ ಗಳು ಬಂದಿವೆ. ತುಂಬಾ ಗೌರವಾನ್ವಿತವಾಗಿ , ಮರ್ಯಾದೆಯಾಗಿ ಕುಳಿತುಕೊಂಡಿರುವ ಇನ್ನೊಂದು ಪೋಟೋ ಹಂಚಿಕೊಳ್ಳುತ್ತಿದ್ದೇನೆ. ನನಗೆ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಅನ್ನಿಸುತ್ತದೆಯೋ ಅಂತಹದ್ದೇ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಕಮೆಂಟಿಗರು ಬೈಗುಳ ಮಾತ್ರ ಇನ್ನೂ ನಿಂತಿಲ್ಲ.
No Comment! Be the first one.