ಶ್ರೀಹರಿ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಕಥೆ ನಾನು ನನ್ ಜಾನು. ಹೆಸರೇ ಸೂಚಿಸುವಂತೆ ಇದು ಪಕ್ಕಾ ಪ್ರೇಮಿಗಳ ಕಥೆ. ಆದರೆ ಇಲ್ಲಿಯವರೆಗೂ ಬಂದಿರುವ ಪ್ರೀತಿ ಪ್ರೇಮಗಳ ಕಥೆಗಿಂತ ಈ ಚಿತ್ರವೂ ವಿಭಿನ್ನವಾಗಿರಲಿದ್ದು, ಎಲ್ಲ ಪ್ರೇಮಿಗಳಿಗೂ ಕನೆಕ್ಟ್ ಆಗಲಿದೆಯಂತೆ. ಸಾಧನೆ ಮಾಡಬೇಕೆಂಬ ತವಕ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಜನ ಮನುಷ್ಯನ ಸಾಧನೆಗಿಂತ ಅವನ ಸಂಪಾದನೆಯ ಮೇಲೆ ಕಣ್ಣಿಟ್ಟಿರುತ್ತಾರೆ. ಜನರ ಚುಚ್ಚು ಮಾತಿನ ಒತ್ತಡಕ್ಕೆ ಸಿಲುಕಿ ವ್ಯಕ್ತಿ ಹೇಗೆಲ್ಲಾ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದೇ ನಾನು ನನ್ ಜಾನು ಚಿತ್ರದ ಕಥೆ.

ಲವ್ ಸ್ಟೋರಿಯೊಂದನ್ನು ಹಾಸ್ಯಮಯವಾಗಿ ಹೇಳಲು ಹೊರಟಿದ್ದರೂ ಸಹ ಎಲ್ಲಿಯೂ ಡಬಲ್ ಮೀನಿಂಗ್ ಬಳಕೆಯನ್ನು ಮಾಡದೇ ಸಾದಾ ಕಾಮಿಡಿಯನ್ನು ಹೊಮ್ಮಲು ನಾನು ನನ್ ಜಾನು ಚಿತ್ರತಂಡ ಯಶಸ್ವಿಯಾಗಿದೆ. ಅಲ್ಲದೇ ಎಲ್ಲಿಯೂ ಆರ್ಟಿಫಿಷಿಯಲ್ ಕಾಮಿಡಿ ಮೊರೆ ಹೋಗದೇ ಸಂದರ್ಭಕ್ಕೆ ತಕ್ಕ ಹಾಸ್ಯವನ್ನು ಸೃಷ್ಟಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್ ಕೂಡ. ಮೋಜೋ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಮನು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಪಲ್ಲವಿ ನಾಯಕಿಯಾಗಿ ಜತೆಯಾಗಿದ್ದಾರೆ. ಮನು ಈ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಸೋಮಾರಿಯ ಪಾತ್ರ ಒಂದು ಕಡೆಯಾದರೆ ಜವಾಬ್ದಾರಿವಂತನ ಪಾತ್ರ ಮತ್ತೊಂದು ಕಡೆಯಂತೆ.

CG ARUN

ಮತ್ತೆ ಒಂದಾಗಲಿದೆ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ!

Previous article

ಸುಷ್ಮಾ ಸ್ವರಾಜ್ ಬಯೋಪಿಕ್ ನಲ್ಲಿ ನಟಿಸಲು ನಾನು ರೆಡಿ: ತಾಪ್ಸಿ!

Next article

You may also like

Comments

Leave a reply

Your email address will not be published. Required fields are marked *