ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಬಲ್ಲಂತಹ ಸಿನಿ ತಾರೆಯರ ಪೈಕಿ ಕನ್ನಡದ ಚಾರ್ಲಿ ಚಾಪ್ಲಿನ್ ನರಸಿಂಹರಾಜು ಅವರದು ಪ್ರಮುಖ ಸ್ಥಾನ. ಅವರ ಆಂಗಿಕ ಅಭಿನಯ, ಮನೋಜ್ಞ ನಟನೆ, ಡೈಲಾಗ್ ಡೆಲಿವರಿಯ ಮೂಲಕವೇ ನೋಡುಗನ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ನರಸಿಂಹ ರಾಜು ಅಗಲಿ ಬಹಳ ವರ್ಷಗಳೇ ಕಳೆದರೂ ಅವರ ನೆನಪುಗಳು ಮಾತ್ರ ಸದಾ ಹಸಿರಾಗಿಯೇ ಉಳಿದಿವೆ.

ಇಂದು ಜುಲೈ 24 ನರಸಿಂಹ ರಾಜು ಅವರ 96ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸಿನಿಮಾ ಮಂದಿಯ ಹುಟ್ಟುಹಬ್ಬವೆಂದರೆ ಸಾಕಷ್ಟು ಸ್ಪೆಷಲ್ ಕಾರ್ಯಕ್ರಮಗಳು ಆಯೋಜಿಸೋದು ಮಾಮೂಲು. ಆದರೆ ನರಸಿಂಹ ರಾಜು ಹುಟ್ಟುಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸಲು ಕಲಾಸ್ಮೃತಿ ರಂಗ ತಂಡ ನಿರ್ಧರಿಸಿದೆ. ನರಸಿಂಹ ರಾಜು ಅವರ ಜೀವನವನ್ನು ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಲು ಈ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನರಸಿಂಹ ರಾಜು ಅವರ ಹುಟ್ಟುಹಬ್ಬದ ದಿನವೇ ನಾಟಕದ ಕೆಲಸಗಳಿಗೆ ಚಾಲನೆ ನೀಡುವ ಜತೆಗೆ ಅವರ ಜನ್ಮದಿನವನ್ನು ಆಚರಿಸಿದೆ.

ನಾಟಕಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಲಕ್ಷ್ಮಣ್ ಪೂಜಾರಿ ಎಂಬುವವರನ್ನು ನರಸಿಂಹ ರಾಜು ಅವರ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದೆ. ವಿಶೇಷವೆಂದರೆ ಈ ನಾಟಕದಲ್ಲಿ ರಾಜ್ ಕುಮಾರ್, ಬಾಲಕೃಷ್ಣ ಸೇರಿದಂತೆ ನರಸಿಂಹ ರಾಜು ಅವರ ಸಮಕಾಲೀನರ ಪಾತ್ರಗಳೂ ಬರಲಿದ್ದು, ಅವರಿಗೆ ತಕ್ಕಂತಹ ಪಾತ್ರಧಾರಿಗಳನ್ನು ಆರಿಸುವ ಜವಾಬ್ದಾರಿ ರಂಗತಂಡದ ಮೇಲಿದೆ. ಶೀಘ್ರದಲ್ಲಿಯೇ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಜೀವನಾಧಾರಿತ ನಾಟಕವನ್ನು ರಂಗದ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿದೆ.

CG ARUN

ಅನೌನ್ಸ್ ಆಯ್ತು ಸಾಹೋ ರಿಲೀಸ್ ಡೇಟ್!

Previous article

ತೆಲುಗಿನ ಡಿಯರ್ ಕಾಮ್ರೆಡ್ ಕನ್ನಡದಲ್ಲಿ ಏನಾಗಬಹುದು?

Next article

You may also like

Comments

Leave a reply

Your email address will not be published. Required fields are marked *