ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ತಡೆ ಹಿಡಿಯಲಾಗಿದ್ದ ವಿವೇಕ್ ಒಬೆರಾಯ್ ನಟಿಸಿರುವ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಪಿ.ಎಂ. ನರೇಂದ್ರ ಮೋದಿ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ದೊರೆತಿದೆ. ಇದೇ ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ಮಾರನೇ ದಿನ ಮೇ 24ರಂದು ಚಿತ್ರ ತೆರೆ ಮೇಲೆ ಅಬ್ಬರಿಸಲಿದೆ.
https://www.youtube.com/watch?v=BT3Rnb8t3Nc
ಈ ಹಿಂದೆ ಚುನಾವಣೆಯ ವೇಳೆ ಸಿನಿಮಾ ರಿಲೀಸ್ ಗೆ ಚಿತ್ರತಂಡ ಡಿಸೈಡ್ ಮಾಡಿತ್ತು. ಆದರೆ ಕಾಂಗ್ರೆಸ್ ರಿಲೀಸ್ ಗೆ ತಡೆಕೋರಿ ಚುನಾವಣಾ ಆಯೋಗಕ್ಕೆ ರಿಕ್ವೆಸ್ಟ್ ಮಾಡಿತ್ತು. ಹೀಗಾಗಿ ಚಿತ್ರ ಬಿಡುಗಡೆ ಮಾಡದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಇದೀಗ ಚಿತ್ರ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಟ್ರೇಲರ್, ಫೋಸ್ಟರ್ ಗಳ ಮೂಲಕ ಜನ ಮೆಚ್ಚುಗೆ ಪಡೆದಿರುವ ಸಿನಿಮಾ ಯಶಸ್ಸು ಕಾಣೋದು ಪಕ್ಕಾ ಎಂಬ ವಿಶ್ವಾಸದಲ್ಲಿ ನಿರ್ಮಾಪಕದಲ್ಲಿದ್ದಾರೆ. ಸಿನಿಮಾದಲ್ಲಿ ಬೊಮಾನ್ ಇರಾನಿ, ಮನೋಜ್ ಜೋಷಿ ಸೇರಿದಂತೆ ಬಹುತೇಕ ತಾರೆಯರು ಕಾಣಿಸಿಕೊಂಡಿದ್ದಾರೆ. ವಿಶೇವೆಂದರೆ ಸಿನಿಮಾವು ಬರೋಬ್ಬರಿ 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ.