ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಇದೀಗ ವಿಶಿಷ್ಟ ಬಗೆಯಲ್ಲಿ ಇದರ ಟೀಸರ್ ಬಿಡುಗಡೆಗೊಳಿಸಲು ಪವನ್ ಮುಂದಾಗಿದ್ದಾರೆ.
ನಾಳೆ ನಡು ರಾತ್ರಿಯ ಹೊತ್ತಿಗೆ ನಟಸಾರ್ವಭೌಮನ ಟೀಸರ್ ಅನಾವರಣಗೊಳ್ಳಲಿದೆ. ಅದು ಹೇಗೆ ಬಿಡುಗಡೆಯಾಗಲಿದೆ ಎಂಬುದನ್ನು ಪವನ್ಗೌಪ್ಯವಾಗಿಟ್ಟಿದ್ದಾರೆ. ಆದರೆ ಸಮಸ್ತ ಪವರ್ಸ್ಟಾರ್ ಅಭಿಮಾನಿ ಪಡೆ ಅಚ್ಚರಿಗೊಳ್ಳುವಂತೆ ಈ ಟೀಸರ್ ಬಿಡುಗಡೆಯಾಗೋದಂತೂ ಖಚಿತ!
ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ನಾಯಕಿಯರಾಗಿರೋ ನಟಸಾರ್ವಭೌಮ ಬಗ್ಗೆ ಈಗಾಗಲೇ ಕ್ರೇಜ್ ಹುಟ್ಟಿಕೊಂಡಿದೆ. ನಟಸಾರ್ವಭೌಮ ಎಂಬುದು ಅಭಿಮಾನಿಗಳೇ ಪ್ರೀತಿಯಿಂದ ಡಾ ರಾಜ್ ಕುಮಾರ್ ಅವರಿಗೆ ಕೊಟ್ಟಿದ್ದ ಬಿರುದು. ಪವನ್ ಒಡೆಯರ್ ಅದನ್ನೇ ಅಪ್ಪು ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ನಡುರಾತ್ರಿಯಲ್ಲಿ ಟೀಸರ್ ಬಿಡುಗಡೆಯಾಗುತ್ತದಲ್ಲಾ? ಆ ಬಿಸಿಯಾರೋ ಮುನ್ನವೇ ನಟಸಾರ್ವಭೌಮನ ದರ್ಶನ ಭಾಗ್ಯ ಯಾವತ್ತೆಂಬ ವಿಚಾರವೂ ಜಾಹೀರಾಗಲಿದೆಯಂತೆ!
#