ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಚಿತಾ ರಾಂ ಹಾಗೂ ಅನುಪಮಾ ಪರಮೇಶ್ವರನ್  ಅಭಿನಯದ ನಟಸಾರ್ವಭೌಮ ಚಿತ್ರ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿನಯ ಹಾಗೂ ಡ್ಯಾನ್ಸ್‍ಗೆ ಅಪ್ಪು ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ನಟಸಾರ್ವಭೌಮ ಸಿನಿಮಾವನ್ನು ರಾಕ್‍ಲೈನ್ ಪ್ರೊಡಕ್ಷನ್ಸ್ ಮೂಲಕ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದರು.   ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ಒಬ್ಬ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದುದ್ದಕ್ಕೂ ಸಾಧು ಕೋಕಿಲ ಹಾಗು ಚಿಕ್ಕಣ್ಣ ಅವರ ಕಾಮಿಡಿ ಝಲಕ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತ್ತು. ಇದಿಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿದ್ದು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ ಟೈನ್‍ಮೆಂಟ್ ಸಿನಿಮಾ ಆಗಿ ಮೂಡಿಬಂದಿತ್ತು.

ಪುನೀತ್ ರಾಜಕುಮಾರ್ ಹಾಗೂ ಪವನ್ ಒಡೆಯರ್ ಅವರ ಕಾಂಬಿನೇಷನ್‍ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ಇದಾಗಿದ್ದು, ಈ ಸಿನಿಮಾದಲ್ಲಿ  ಬಹುದೊಡ್ಡ ತಾರಾಬಳಗವೇ  ಇತ್ತು. ಅಪ್ಪು ಜೋಡಿಯಾಗಿ ಡಿಂಪಲ್ ಬ್ಯೂಟಿ ರಚಿತಾರಾಮ್ ಹಾಗೂ ಮಲೆಯಾಳಿ ಬೆಡಗಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದು, ಉಳಿದಂತೆ ರವಿಶಂಕರ್, ಹಿರಿಯ ನಟಿ ಬಿ.ಸರೋಜಾದೇವಿ, ಪ್ರಕಾಶ್ ಬೆಳವಾಡಿ, ಅವಿನಾಶ್ ಹೀಗೆ ಸಾಕಷ್ಟು  ಹಿರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿತ್ತು. ಇನ್ನು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ  ದೊಡ್ಮನೆ ಹುಡುಗ  ಚಿತ್ರ 21 ರೇಟಿಂಗ್ ಗಳಿಸಿದ್ದು, ಕಿರುತೆರೆಯಲ್ಲಿ ಅತಿ ಹೆಚ್ಚು ರೇಟಿಂಗ್ ಗಳಿಸಿದ ಸಿನಿಮಾ ಎನ್ನುವ ಖ್ಯಾತಿ ಪಡೆದುಕೊಂಡಿತ್ತು.  ಈಗ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರ ಅಭಿನಯದ ಯಶಸ್ವೀ ಚಿತ್ರ ನಟಸಾರ್ವಭೌಮ ಪ್ರಸಾರವಾಗುತ್ತಿದ್ದು ಈ ಸಿನಿಮಾ ಕೂಡ ಮತ್ತೊಮ್ಮೆ ರೇಟಿಂಗ್‍ನಲ್ಲಿ ದಾಖಲೆ ಬರೆಯುವ ನಿರೀಕ್ಷೆಯಿದೆ.  ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಪವರ್ ಸ್ಟಾರ್ ಅಭಿನಯದ ಪವರ್‍ಫುಲ್‍ ಫ್ಯಾಮಿಲಿ ಎಂಟಟೈನ್‍ಮೆಂಟ್ ಸಿನಿಮಾ ನಟ ಸಾರ್ವಭೌಮ ಇದೇ ತಿಂಗಳು ಅಂದರೆ ಮೇ 26ರ ಭಾನುವಾರ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಸ್ಕ್ರೀನ್ ನಲ್ಲಿ ಅಪ್ಪು ಆರ್ಭಟವನ್ನು ನೋಡಲು ಮಿಸ್ ಮಾಡಿಕೊಂಡಿದ್ದವರು ಸ್ಮಾಲ್ ಸ್ಕ್ರೀನ್ ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.

CG ARUN

ಮುಂದಿನ ತಿಂಗಳು ಥಿಯೇಟರ್ ಗೆ ಹ್ಯಾಂಗೋವರ್!

Previous article

ಏಕ್ ಲವ್ ಯಾ ಸ್ಟಾರ್ಟ್ ಆಯ್ತು!

Next article

You may also like

Comments

Leave a reply

Your email address will not be published. Required fields are marked *