ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸಾ ವರ್ಷ ಕಣ್ತೆರೆಯಲಿದೆ. ಹಳತನ್ನು ಬೀಳ್ಕೊಟ್ಟು ಹೊಸತನ್ನು ಎದುರುಗೊಳ್ಳೋ ಸಂಭ್ರಮಕ್ಕೆ ಪುನೀತ್ ರಾಜ್ಕುಮಾರ್ ನಟಸಾರ್ವಭೌಮ ಚಿತ್ರದ ಹಾಡೊಂದರ ಮೂಲಕ ಜೊತೆಯಾಗಿದ್ದಾರೆ. ಎಣ್ಣೆ ಹೊಡೆಯೋರ ಮನಗೆದ್ದ, ಆ ಸಂಭ್ರಮವನ್ನು ಹೆಚ್ಚಿಸಿದ, ಹುಚ್ಚೆದ್ದು ಕುಣಿಯುವಂತೆ ಮಾಡಿಡಿದ ಹಾಡುಗಳು ಸಾಕಷ್ಟಿವೆ. ಆ ಸಾಲಿಗೆ ಸೇರುವಂಥಾ ಸಾಂಗೊಂದು ನಟಸಾರ್ವಭೌಮ ಚಿತ್ರದ ಕಡೆಯಿಂಣದ ಬಿಡುಗಡೆಯಾಗಿದೆ.
ನಿರ್ದೇಶಕ ಪವನ್ ಒಡೆಯರ್ ಹೊಸಾ ವರ್ಷದ ಸಂಭ್ರಮ ಹೆಚ್ಚಿಸಲೆಂದೇ ನಟಸಾರ್ವಭೌಮದ ಈ ಎಣ್ಣೆ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಬರೆದಿರುವವರು ಯೋಗರಾಜ ಭಟ್. ಏಳೂವರೆ ಆಯ್ತು ಅಂದ್ರೆ ತುಟಿ ಒಣಗುತ್ತೆ ಅಂತ ಶುರುವಾಗುವ ಈ ಹಾಡನ್ನು ವಿಜಯ್ಪ್ರಕಾಶ್ ಹಾಡಿದ್ದಾರೆ.
ಈ ಹಾಡಂತೂ ಈ ಬಾರಿ ಹೊಸಾ ವರ್ಷದ ಉನ್ಮಾದವನ್ನು ಮತ್ತಷ್ಟು ಉದ್ದೀಪಿಸೋದರಲ್ಲಿ ಯಾವ ಸಂಶಯವೂ ಇಲ್ಲ. ಇದಕ್ಕೆ ಡಿ ಇಮ್ಮಾನ್ ಸಂಗೀತ ನೀಡಿದ್ದಾರೆ. ಡ್ಯಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಹು ಕಾಲದ ನಂತರ ಪುನೀತ್ ಈ ಹಾಡಿಗೆ ಅಭಿಮಾನಿಗಳೆಲ್ಲ ಹುಚ್ಚೇಳುವಂತೆ ಹೆಜ್ಜೆ ಹಾಕಿದ್ದಾರಂತೆ. ನಟಸಾರ್ವಭೌಮ ಚಿತ್ರದಲ್ಲಿ ಒಟ್ಟು ನಾಲಕ್ಕು ಹಾಡುಗಳಿವೆ. ಒಂದೊಂದೂ ಬೇರೆ ವೆರೈಟಿಯವಂತೆ. ಈ ಆಡಿಯೋ ಲಾಂಚ್ ಕಾರ್ಯಕ್ರಮ ಜನವರಿ ಐದರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಆದರೆ ಹೊಸಾ ವರ್ಷದ ಮಜಾ ಹೆಚ್ಚಿಸಲೆಂದೇ ಒಂದು ಹಾಡನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ.
#
No Comment! Be the first one.