ಹಿರಿಯ ನಿರ್ದೇಶಕಎಸ್.ನಾರಾಯಣ್ ಸಿನಿಮಾ ನಿರ್ದೇಶನದಜೊತೆಜೊತೆಗೆ ‘ನವರಸ ನಟನಅಕಾಡೆಮಿ’ ಪ್ರಾಂಶುಪಾಲರಾಗಿದ್ದಾರೆಎನ್ನುವುದು ತಿಳಿದ ವಿಷಯ. ಕಳೆದ ವರ್ಷಆರಂಭವಾದ ಸಂಸ್ಥೆ ಇದೀಗ ಎರಡನೇ ವರ್ಷಕ್ಕೆಕಾಲಿಟ್ಟಿದೆ.ಕಳೆದ ಒಂದು ವರ್ಷದಲ್ಲಿಒಟ್ಟು ಮೂರು ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಈಜು, ನೃತ್ಯ,ಫೈಟಿಂಗ್ ಮತ್ತುಚಿತ್ರೀಕರಣದಅನುಭವ, ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡಿ ಸಜ್ಜುಗೊಳಿಸಲಾಗಿದೆ.
ಫೆಬ್ರವರಿ 10ರಿಂದ ಎರಡನೇ ವರ್ಷದ ಮೊದಲ ತಂಡದತರಗತಿ ಪ್ರಾರಂಭವಾಗಲಿದೆ. ಈ ಕುರಿತು ಪ್ರಾಂಶುಪಾಲ ಎಸ್.ನಾರಾಯಣ್ ಮಾಹಿತಿ ನೀಡಿದ್ದಾರೆ.
‘ಸಾಮಾನ್ಯವಾಗಿತರಬೇತಿಕೇಂದ್ರಎಂದಾಕ್ಷಣ ಪುಸ್ತಕದ ಬೋಧನೆಯೇ ಹೆಚ್ಚಿರುತ್ತದೆಎಂದು ಭಾವಿಸಿರುತ್ತಾರೆ. ಆದರೆ, ‘ನವರಸ ನಟನಅಕಾಡೆಮಿ’ಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂರುತಂಡದ ವಿದ್ಯಾರ್ಥಿಗಳು ಸಾಕಷ್ಟು ಕಲಿತಿದ್ದಾರೆ ಬೋಧನೆಗಿಂತ ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ನಮ್ಮಲ್ಲಿತರಬೇತಿ ಪಡೆದ ಬಹುತೇಕರುತಾವೇಕಿರುಚಿತ್ರ ತಯಾರಿಸಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಿನ ಕಲಿಕೆ ಕೊಡುವ ಸವಾಲು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಮೇಕಪ್, ಎಡಿಟಿಂಗ್ ಹಾಗೂ ಕಲಾ ವಿಭಾಗವನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ. ದೂರದ ಊರುಗಳಿಂದ ಕನಸು ಹೊತ್ತು ಬಂದಯುವ ಪ್ರತಿಭೆಗಳು ಸಾಕಷ್ಟು ಕಲಾಜ್ಞಾನವನ್ನು ‘ನವರಸ ನಟನಅಕಾಡೆಮಿ’ ಮೂಲಕ ಸಂಪಾದಿಸಿಕೊಂಡು ಹೋಗಬಹುದು.
ಚಿತ್ರರಂಗಕ್ಕೆ ಬರಲುಆಸಕ್ತಿಯಿರುವ ಮಹಿಳಾ ವಿದ್ಯಾರ್ಥಿಗಳಿಗೆ ಒಟ್ಟಾರೆ ಫೀಸ್ನಲ್ಲಿ ಶೇ.೪೦ರಷ್ಟು ರಿಯಾಯಿತಿ ನೀಡುವ ಮೂಲಕ ಅವರನ್ನು ಪ್ರೋತ್ಸಾಹ ಮಾಡಲಾಗುತ್ತಿದೆಎನ್ನುತ್ತಾರೆಎಸ್.ನಾರಾಯಣ್.ಹಿ ರಿಯ ನಟಜಗ್ಗೇಶ್ ಸಹಕಾರದೊಂದಿಗೆ ಒಂದು ವರ್ಷ ನಿರಾಳವಾಗಿ ಮುಗಿಸಿ, ಎರಡನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್.
ನಿರ್ದೇಶಕರಾದಎಸ್.ಮಹೇಂದರ್, ಲಕ್ಕಿ ಶಂಕರ್ ಹಾಗೂ ನೀನಾಸಂ ಬಳಗದ ನುರಿತವರು ನಟನೆ, ನಿರ್ದೇಶನ, ಡೈಲಾಗ್ಡೆಲಿವರಿ ಹಾಗೂ ಕ್ಯಾಮೆರಾಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇಕಿರುಚಿತ್ರ ಸಿದ್ದಪಡಿಸಿ ಅರ್ಹತಾ ಪತ್ರ ವಿತರಣೆ ಮಾಡುವ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತದೆ ನವರಸ ನಟನಅಕಾಡೆಮಿ.
ಕಳೆದ ಎರಡು ದಶಕಗಳಿಂದ ಕನ್ನಡಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ನವರಸ ನಟನಅಕಾಡೆಮಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂಆಗಿರುವ ಮಾಲೂರು ಶ್ರೀನಿವಾಸ್ ಸಹ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ.
ನಾಲ್ಕು ಮತ್ತು ಆರು ತಿಂಗಳ ನಟನೆ ಹಾಗೂ ನಿರ್ದೇಶನದಕೋರ್ಸ್ ಹಾಗೂ ವಾರಾಂತ್ಯದ ತರಗತಿಗಳು ಅಕಾಡೆಮಿಯಲ್ಲಿ ನಡೆಯಲಿದ್ದು, ಜನವರಿಯಲ್ಲಿ ಸದಾಶಿವನಗರದಲ್ಲಿರುವ ‘ನವರಸ ನಟನಅಕಾಡೆಮಿ’ಯಲ್ಲಿಆಡಿಷನ್ ನಡೆಯಲಿದೆ. ತರಗತಿಗಳು ಫೆಬ್ರವರಿ 11ರಿಂದ ಶುರುವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ: ನವರಸ ನಟನಅಕಾಡೆಮಿ, ಮೊ. ಸಂಖ್ಯೆ; 8802 19666/98804 19666 ಸಂಪರ್ಕಿಸಬಹುದು.
#