ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ಕಮ್ ಹೀರೋ ಕೂಡಾ ಆಗಿರುವ ಹುಡುಗ ನವೀನ್ ಸಜ್ಜು. ಸಿನಿಮಾಗೆ ಬಂದು ಹೆಚ್ಚೆಂದರೆ ಐದೋ ಅರು ವರ್ಷಗಳಾಗಿರಬಹುದು. ಆದರೆ ನೂರಾರು ಸಿನಿಮಾಗಳು, ಸಾವಿರಾರು ಹಾಡುಗಳನ್ನು ಹಾಡಿರುವ ಕಲಾವಿದರಿಗೂ ಇರದಷ್ಟು ಭಯಂಕರ ಮರೆವು ಈ ಎಳೇ ಕೂಸಿಗೆ ಅಮರಿಕೊಂಡಂತೆ ಕಾಣುತ್ತಿದೆ.
ಈ ವರ್ಷ ಬಿಡುಗಡೆಯಾಗಿ ಹಿಟ್ ಸಿನಿಮಾ ಲಿಸ್ಟಿಗೆ ಸೇರಿರುವ ಕೆಮಿಸ್ಟ್ರಿ ಅಫ್ ಕರಿಯಪ್ಪ ಸಿನಿಮಾಗಾಗಿ ಸಜ್ಜು ಹಾಡೊಂದನ್ನು ಹಾಡಿದ್ದ. ಅದು ಈತ ಬಿಗ್ ಬಾಸ್ ಗೆ ಹೋಗೋಕೆ ಮುಂಚೆ ರೆಕಾರ್ಡಿಂಗ್ ಆಗಿತ್ತಂತೆ. ರಿಯಾಲಿಟಿ ಶೋದಿಂದ ಹೊರಬಂದಮೇಲೆ ನವೀನ್ ಸಜ್ಜುಗೆ ಕರಿಯಪ್ಪನ ನಿರ್ದೇಶಕ ಕರೆ ಮಾಡಿ ‘ಸರ್ ನಮಸ್ಕಾರ ಸರ್… ನಾನು ಕೆಮಿಸ್ಟ್ರಿ ಅಫ್ ಕರಿಯಪ್ಪ ಸಿನಿಮಾ ಡೈರೆಕ್ಟ್ರು ಕುಮಾರ್ ಅಂತಾ…’ ಅಂದರಂತೆ. ಅದರೆ ನವೀನನಿಗೆ ಮಾತ್ರ ಆ ಸಿನಿಮಾ ಯವುದು ಅಂತಾನೇ ಗೊತ್ತಾಗಲಿಲ್ಲವಂತೆ. ಕಕ್ಕಾಬಿಕ್ಕಿಯಾದ ಕುಮಾರ್ ‘ನೀವು ನಮ್ಮ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದೀರ’ ಎಂದರಂತೆ. ಆಗ ಕೂಡಾ ಅದು ಯಾವ ಸಿನಿಮಾ, ಯಾವ ಹಾಡು ಅನ್ನೋದು ಗೊತ್ತಾಗಲಿಲ್ಲವಂತೆ. ಬಿಗ್ ಬಾಸ್ ಗೆ ಹೋಗಿ ಬರೋ ಹೊತ್ತಿಗೆ ಹಿಂದಿನದ್ದೆಲ್ಲಾ ಮರೆತೋಗಿತ್ತಂತೆ. ಸಾಮಾನ್ಯವಾಗಿ ನವೀನ್ ಸಜ್ಜು ತಾವು ಹಾಡಿದ ಹಾಡುಗಳನ್ನು ಡೈರಿಯಲ್ಲಿ ಬರೆದುಕೊಳ್ಳುತ್ತಾರಂತೆ. ಹಾಗೆ ಬರೆದೂ ಬರೆದೂ ಡೈರಿಯ ಹಾಳೆಗಳೆಲ್ಲಾ ತುಂಬಿಹೋಗಿವೆಯಂತೆ. ಹಾಗಾದರೆ ನವೀನ್ ಸಜ್ಜು ಯಾವ್ಯಾವ ಭಾಷೆಯಲ್ಲಿ ಅದೆಷ್ಟು ಸಾವಿರ ಹಾಡುಗಳನ್ನು ಹಾಡಿದ್ದಾರೋ ಲೆಕ್ಕ ಸಿಗುತ್ತಿಲ್ಲ. ಯಾರಾದರೂ ಸಂಶೋಧಕರಿದ್ದರೆ ನವೀನ್ ಸಜ್ಜು ಗಾನಸುಧೆಯಲ್ಲಿ ಮೂಡಿಬಂದಿರುವ ಹಾಡುಗಳನ್ನು ಹುಡುಕಿ ಅಂಕಿ ಅಂಶಗಳನ್ನು ದಾಖಲಿಸಬೇಕಿದೆ.
No Comment! Be the first one.