ಗಾಯನದಿಂದ ನಟನೆಗೆ ಬಡ್ತಿಪಡೆದ ನವೀನ್ ಸಜ್ಜು!

ಎ‍ಣ್ಣೆ ನಮ್ದು ಊಟ ನಿಮ್ದು ಎಂದು ಹಾಡಿ ಪಡ್ಡೆ ಹುಡುಗರು ನಿದ್ದೆಯಲ್ಲಿಯೂ ಕುಪ್ಪಳಿಸುವಂತೆ ಮಾಡಿದ್ದ ಪ್ರತಿಭಾನ್ವಿತ ಗಾಯಕ ನವೀನ್ ಸಜ್ಜು ಬಿಗ್ ಬಾಸ್ ನಲ್ಲಿ ಕಂಟೆಸ್ಟ್ ಮಾಡಿದ ನಂತರ ಮನೆಮಾತಾದವರು. ಹಾಡುವುದರ ಜತೆಗೆ ಸಂಗೀತ ಸಂಯೋಜನೆಯಲ್ಲಿಯೂ ಜನಪ್ರಿಯರಾಗಿರುವ ನವೀನ್ ಸಜ್ಜು, ಸದ್ಯ ಗಾಯನದಿಂದ ನಟನೆಯತ್ತ ಬಡ್ತಿ ಪಡೆದಿದ್ದಾರೆ.

ಇಲ್ಲಿಯವರೆಗೂ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಳ್ಳದ ನವೀನ್ ನೇರವಾಗಿ ನಾಯಕನಾಗಿ ನಟಿಸುವ ಅವಕಾಶವನ್ನು ಪಡೆದಿದ್ದಾರೆ.

ಹೌದು ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೆಶಕನ ಜತೆಗೆ ನವೀನ್ ಸಜ್ಜು ಕೈ ಜೋಡಿಸಿದ್ದಾರೆ. ನಿರ್ದೇಶಕ ಕುಮಾರ್ ಮತ್ತು ತಂಡ ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಕರಿಯಪ್ಪ ತಬಲಾ ನಾಣಿಯೂ ಅಭಿನಯಿಸುತ್ತಿರುವುದು ವಿಶೇಷವಾಗಿದೆ. ಜುಲೈನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುತ್ತಿದ್ದು, ಸದ್ಯದಲ್ಲಿ ಅಧಿಕೃತ ಮಾಹಿತಿ ರಿವೀಲ್ ಆಗಲಿದೆ.

 


Posted

in

by

Tags:

Comments

Leave a Reply