ಈಗಷ್ಟೇ ಬಿಗ್ ಬಾಸ್ಗೆ ಹೋಗಿಬಂದು ಫೇಮಸ್ಸಾಗಿರುವ, ಗಾಯಕ ನವೀನ್ ಸಜ್ಜುಗೆ ಹುಡ್ಗೀರ ಸಹವಾಸವೇ ಬೇಡವಂತೆ.
ನವಯುವಕ ನವೀನ್ ಸಜ್ಜು ಹುಡುಗಿಯರ ಸಹವಾಸ ಬೇಡ ಅಂದಿರೋದು ‘ಗಿರ್ಗಿಟ್ಲೆ ಸಿನಿಮಾದ ಹಾಡಿನಲ್ಲಿ!
ರವಿಕಿರಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗಿರ್ಗಿಟ್ಲೆ ಸಿನಿಮಾಗೆ ಲಿಯೋ ಪೀಟರ್ಸ್ ಸಂಗೀತ ನೀಡಿದ್ದಾರೆ. ಇನ್ನೇನು ತೆರೆಗೆ ಬರಲು ಸಕಲ ರೀತಿಯ ತಯಾರಿ ನಡೆಸಿರುವ ಗಿರ್ ಗಿಟ್ಲೆ ಸಿನಿಮಾದ ವಿಶೇಷ ಹಾಡೊಂದರಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣವನ್ನೂ ಪೂರೈಸಿಕೊಂಡಿರುವ ಈ ಹಾಡು ನವೀನ್ ಸಜ್ಜು ಕಂಠದಿಂದ ಹೊರಹೊಮ್ಮಿದರೆ ಚೆಂದ ಅನ್ನಿಸಿದ್ದರಿಂದ ಮೊನ್ನೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ನವೀನ್ ದನಿಯಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಯಿತು.
ಈಗಾಗಲೇ ಸಜ್ಜು ಹಾಡಿರುವ ತಿನ್ಬೇಡ ಕಮ್ಮಿ, ಎಣ್ಣೆ ನಮ್ದು ಊಟ ನಿಮ್ದು ಸೇರಿದಂತೆ ಸಾಕಷ್ಟು ಹಾಡುಗಳು ಹಿಟ್ ಆಗಿವೆ. ಈಗ ‘ಬ್ಯಾಡ ಗುರು ಬ್ಯಾಡಾ ಗುರು ಹುಡ್ಗೀರ್ ಸಾವಾಸಾ ಅನ್ನೋ ನವೀನ ಹಾಡು ಹೊರಬಂದರೆ ಬಹುಶಃ ಅದು ಹುಡುಗರ ಪಾಲಿನ ರಾಷ್ಟ್ರಗೀತೆಯಾದರೂ ಡೌಟಿಲ್ಲ!
No Comment! Be the first one.