ಕೇವಲ ತನ್ನ ಹದಿನಾಲ್ಕನೇ ಬಣ್ಣ ಹಚ್ಚಿದ ಮಲಯಾಳಂ ಚಿತ್ರರಂಗದ ಖ್ಯಾತನಟಿ ನವ್ಯಾ ನಾಯರ್ ಅವರು ಚಿತ್ರರಂಗದಲ್ಲಿನ ತಮ್ಮ ಅನುಭವದ ಸಾರಗಳನ್ನು ಅಕ್ಷರ ರೂಪಕ್ಕಿಳಿಸಿ ಆತ್ಮಕಥನ ರಚಿಸಿದ್ದರು. ಅವರು ಮಲಯಾಳಂನಲ್ಲಿ ಬರೆದಂಥ ಆ ಕೃತಿಯ ಹೆಸರು ನವ್ಯ ರಸಂಗಳ್. ಈಗ ಅದೇ ಪುಸ್ತಕದ ಸಾರವನ್ನು ಗ್ರಹಿಸಿ ಅದನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದವರು ಪ್ರಾಧ್ಯಾಪಕಿ ಜಾನೆಟ್ ಐ.ಜೆ. ಇದರ ನಿರೂಪಣೆ ಮತ್ತು ಸಂಯೋಜನೆಯನ್ನು ಜಿ.ಎಸ್.ಯುಧಿಷ್ಠಿರ ಮಾಡಿದ್ದಾರೆ. ಈ ಒಂದು ಕೃತಿಗೆ ಧನ್ಯವೀಣಾ ಎನ್ನುವ ಶೀರ್ಷಿಕೆ ಸಹ ನೀಡಿದ್ದಾರೆ. ಧನ್ಯವೀಣಾ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಪತ್ರಕರ್ತೆ, ಓ ಮನಸೇ ಸಂಪಾದಕಿ ಭಾವನಾ ಬೆಳಗೆರೆ ಧನ್ಯವೀಣಾ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ನಟಿ ನವ್ಯಾ ನಾಯರ್, ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಕಲ್ಲೂರು, ರಾಷ್ಟçಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪುಸ್ತಕದ ನಿರೂಪಕ ಜಿ.ಎಸ್.ಯುಧಿಷ್ಟಿರ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನವ್ಯಾ ನಾಯರ್ ಹಿಂದೆ ನಾನು ದೃಷ್ಯಂ ಚಿತ್ರದ ಪ್ರೀಮಿಯರ್ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದೆ. ಆನಂತರ ಈಗಲೇ ಬಂದಿರುವುದು, ಕನ್ನಡ ಚಿತ್ರರಂಗದ ಬಗ್ಗೆ ನನಗೆ ಒಳ್ಳೇ ಅನುಭವಗಳಿವೆ. ಇಲ್ಲಿ ಉತ್ತಮ ವಾತಾವರಣವಿದೆ. ನನ್ನ ಮೊದಲ ಕನ್ನಡ ಚಿತ್ರ ಗಜದಲ್ಲಿ ದರ್ಶನ್ ಅವರ ಜೊತೆ, ಭಾಗ್ಯದ ಬಳೆಗಾರದಲ್ಲಿ ಶಿವರಾಜ್ಕುಮಾರ್ ಜೊತೆ ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಇದು ಆತ್ಮಕಥನವಲ್ಲ, ನನ್ನ ಕಲಾಜೀವನದ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿದ್ದೇನೆ ಅಷ್ಟೇ, ಮಲಯಾಳಂನಲ್ಲಿ ನಾನು ಬರೆದ ಈ ಪುಸ್ತಕವನ್ನು ಮಂಜು ವಾರಿಯರ್ ಅವರು ಬಿಡುಗಡೆ ಮಾಡಿದ್ದರು.
ಇಲ್ಲಿನ ಕೆಲವೊಂದು ಪದಗಳನ್ನು ಭಾಷಾಂತರ ಮಾಡುವುದು ಕಷ್ಟದ ಕೆಲಸ. ಅದನ್ನು ಜಾನೆಟ್ರವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನೂ ಕೆಲ ಪದಗಳು ಸ್ಥಳೀಯ ಭಾಷೆಯ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಇಂಥ ಸೂಕ್ಷ ್ಮ ಅಂಶಗಳನ್ನು ಜಾಗರೂಕತೆಯಿಂದ ನೋಡಿಕೊಂಡಿದ್ದಾರೆ. ಇನ್ನು ೮ ವರ್ಷಗಳ ಗ್ಯಾಪ್ ನಂತರ ಮತ್ತೆ ನಾನು ಬಣ್ಣ ಹಚ್ಚಿದ್ದೇನೆ. ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಉರುಪಿ. ಸದ್ಯ ನಾಯಕಿಪ್ರಧಾನ ಕಥಾನಕ ಒಳಗೊಂಡಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ನಾನು ಏನೇ ಸಾಧನೆ ಮಾಡಿದ್ದರೂ ಅದರ ಹಿಂದೆ ನನ್ನ ತಂದೆ, ತಾಯಿ ಇದ್ದಾರೆ ಎಂದು ಹೇಳಿಕೊಂಡರು. ಲೇಖಕಿ ಜಾನೆಟ್ ಮಾತನಾಡಿ ಯುಧಿಷ್ಟಿರ ಅವರು ನನ್ನ ಬರವಣಿಗೆಯನ್ನು ಗುರ್ತಿಸಿ ಈ ಪುಸ್ತಕವನ್ನು ಅನುವಾದ ಮಾಡಿಕೊಡುವಂತೆ ಹೇಳಿದರು. ಪುಸ್ತಕದ ಮೂಲ ಆಶಯ ಓದುಗನಿಗೆ ಸಂಪೂರ್ಣವಾಗಿ ತಲುಪಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು, ಯುಧಿಷ್ಠಿರ ಅವರ ಸಹಕಾರದಿಂದ ಈ ಪುಸ್ತಕ ನಿರೂಪಿಸಿದ್ದೇನೆ ಎಂದು ಹೇಳಿದರು
No Comment! Be the first one.