ಬಡಗುತಿಟ್ಟು ಯಕ್ಷರಂಗದ ಹಿರಿಯ ದಂತ ಕಲಾವಿದ ಭಾಗವತ ನೆಬ್ಬೂರು ನಾರಾಯಣರವರು ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಭಾಗವತ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ತಮ್ಮ ಕಂಚಿನ ಕಂಠದಿಂದ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗ ಪರಂಪರೆಯಲ್ಲಿ ಭಾಗವತರಾಗಿ ಭಾಗವತ ನೆಬ್ಬೂರು ನಾರಾಯಣ ಪ್ರಸಿದ್ದರಾಗಿದ್ದರು. ಇಡುಗುಂಜಿ ಕೆರೆಮನೆ, ಕೋಟ ಅಮೃತೇಶ್ವರಿ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ರಂಜಿಸಿ, ಮೆರೆಸಿದ ಹೆಗ್ಗಳಿಕೆಯನ್ನು ಗಳಿಸಿದ್ದವರು. ರಾಷ್ಟ್ರದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದ ಭಾಗವತರ ನಿಧನಕ್ಕೆ ಯಕ್ಷಾಭಿಮಾನಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

CG ARUN

ಐ ಲವ್ ಯು ಸಿನಿಮಾಕ್ಕೆ ಹೆಚ್ಚಿದ ಬೇಡಿಕೆ!

Previous article

“ನಿಖಿಲ್ ಎಲ್ಲಿದ್ಯಪ್ಪ” ಸಿನಿಮಾಗಾಗಿ ಹೆಚ್ಚಿದ ಬೇಡಿಕೆ!

Next article

You may also like

Comments

Leave a reply

Your email address will not be published. Required fields are marked *