ನೀನಾಸಂ ಸತೀಶ್ ಈಗ ವರ್ಕೌಟ್ ವ್ರತ ಕೈಗೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫಿಟ್ನೆಸ್ ಬಗ್ಗೆ ಗಮನ ಹರಿಸುವ, ಅದನ್ನು ಗಂಭೀರವಾಗಿ ಪರಿಗಣಿಸೋ ನಟರ ಸಂಖ್ಯೆ ಕಡಿಮೆ. ಆದರೆ, ಪಾತ್ರ ಡಿಮ್ಯಾಂಡು ಮಾಡಿದರೆ ಎಂಥಾ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧ ಎಂಬುದನ್ನು ನೀನಾಸಂ ಸತೀಶ್ ಈಗಾಗಲೇ ಸಾಬೀತುಪಡಿಸಿದ್ದಾರೆ. ಇಲ್ಲಿರೋ ವಿಡಿಯೋ ಸತೀಶ್ ಎಫರ್ಟಿಗೆ ಸ್ಪಷ್ಟ ಸಾಕ್ಷಿಯಂತಿದೆ!


ತಾವು ನಟಿಸುತ್ತಿರುವ ಸಿನಿಮಾಗಳ ಪಾತ್ರಗಳು ಇಂಥಾ ಫಿಟ್ನೆಸ್ ಅನ್ನು ಬೇಡುತ್ತದೆಯಂತೆ. ಇದನ್ನು ಸವಾಲಾಗಿ ಸ್ವೀಕರಿಸಿರೋ ಸತೀಶ್ ಸದ್ದಿಲ್ಲದೆ ಜಿಮ್ ಸೇರಿಕೊಂಡು ತನ್ನ ದೇಹವನ್ನು ಹದಗೊಳಿಸಿದ್ದಾರೆ. ಈ ಹಿಂದೆ ಕೂಡಾ ಅಯೋಗ್ಯ ಚಿತ್ರೀಕರಣದ ಸಂದರ್ಭದಲ್ಲೂ ಸತೀಶ್ ಸಾಕಷ್ಟು ದೈಹಿಕ ಕಸರತ್ತು ಮಾಡಿದ್ದರು. ಈಗ ಸತೀಶ್ ನಿಜಕ್ಕೂ ಅಚ್ಚರಿಯಾಗುವಂತೆ ದೇಹವನ್ನು ಮತ್ತಷ್ಟು ಅಣಿಗೊಳಿಸಿಕೊಂಡಿದ್ದಾರೆ. ಕೈತುಂಬ ಅವಕಾಶಗಳಿರುವ ನಟನೊಬ್ಬ ಬಂದ ಪಾತ್ರಗಳಲ್ಲಿ ನಟಿಸುತ್ತಾ ಸುಮ್ಮನಿದ್ದುಬಿಡಬಹುದು. ಆದರೆ ತಾನು ತೆರೆಮೇಲೆ ಫಿಟ್ ಆಗಿ ಕಾಣಬೇಕು, ನೋಡುಗರ ಕಣ್ಣಿಗೆ ಪ್ರತೀ ಚಿತ್ರದಲ್ಲೂ ಹೊಸದಾಗಿ ಗೋಚರಿಸಬೇಕು ಅಂತಾ ಬಯಸುವ ನೀನಾಸಂ ಸತೀಶ್ ನಿಜಕ್ಕೂ ನಮ್ಮ ಕನ್ನಡದ ಹೆಮ್ಮೆಯ ಹೀರೋ!

CG ARUN

ರೆಬೆಲ್ ಕನಸನ್ನು ಈಡೇರಿಸುತ್ತಾರಾ ಇವರಿಬ್ಬರೂ?

Previous article

“ನಾನು ಕೈಗೆ ಹಾಕಿರುವುದು ಬಳೆ ಅಲ್ಲ ಅಂದರು ಸುದೀಪ್!

Next article

You may also like

Comments

Leave a reply

Your email address will not be published. Required fields are marked *