ಸಿನಿಮಾರಂಗದಲ್ಲೀಗ NFT ಜಮಾನ ಶುರುವಾಗಿದೆ. ಸ್ಟಾರ್​ ಹೀರೋಗಳು ನಟಿಸೋ ತಮ್ಮ ಸಿನಿಮಾದಲ್ಲಿ ಬಳಸಿದ ಬೈಕ್ ಕಾರು. ಗನ್​​ ಆ ಹೀರೋ ಪ್ರತಿಮೆ ಇತ್ಯಾದಿ ವಸ್ತುಗಳನ್ನ ಸೇಮ್​ ಟು ಸೇಮ್​​ ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಬಿಡೋ ಪದ್ಧತಿ ಈಗ ಚಿತ್ರರಂಗದಲ್ಲಿ ಶುರುವಾಗಿದೆ. ಅಷ್ಟಕ್ಕೂ NFT ಎಂದರೇನು ಅನ್ನುವುದು ತಿಳಿಯೋಣಾ ಬನ್ನಿ.

ಏನಿದು NFT? ಹೇಗೆ ಕೆಲಸ ಮಾಡುತ್ತದೆ?

ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಬಹುದಾದ ಪೇಂಟಿಂಗ್‌, ಫೋಟೋ, ವಿಡಿಯೋ, ಜಿಫ್‌, ಸಂಗೀತ, ಸೆಲ್ಫಿ, ಟ್ವೀಟ್‌ ಅನ್ನು ಕೂಡ  ಎನ್‌ಎಫ್‌ಟಿ ಮಾಡಬಹುದು. ಎನ್‌ಎಫ್‌ಟಿಗಳು ಬ್ಲಾಕ್‌ಚೈನ್‌ ವ್ಯವಹಾರದ ಮೂಲಕ ನಡೆಯುತ್ತವೆ. ಬ್ಲಾಕ್‌ಚೈನ್‌ ಎಂದರೆ ಒಂದು ನಿಮ್ಮ ಬ್ಯಾಂಕ್‌ ಪಾಸ್‌ಬುಕ್‌ನಂಥ, ಎಲ್ಲ ವಹಿವಾಟುಗಳೂ ದಾಖಲಿಸಲಾಗಿರುವ ಡಿಜಿಟಲ್‌ ಲೆಡ್ಜರ್‌. ಇದಕ್ಕೆ ನಿಮ್ಮ ಮಾಲಿಕತ್ವದ ಪ್ರಮಾಣಪತ್ರವನ್ನು ಬ್ಲಾಕ್‌ಚೈನ್‌ ನಿಗದಿಪಡಿಸುತ್ತದೆ. ಇದು ಒಂದು ರೀತಿ ಕಾಪಿರೈಟ್‌ ಇದ್ದಂತೆ. ಸಾಮಾನ್ಯವಾಗಿ ನಾವು ಗೂಗಲ್‌ನಲ್ಲಿ ನಮಗೆ ಬೇಕಾದ ಫೋಟೋವನ್ನು ಹುಡುಕಿ, ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತೇವೆ ಅಥವಾ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ ಎಂದರೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತೇವೆ.  ಹೀಗೇ ಸುಲಭವಾಗಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಲ್ಲವೇ? ಇವುಗಳಿಗೆ ಕೋಟ್ಯಂತರ ಹಣ ನೀಡುವ ಅಗತ್ಯವಿದೆಯೇ ಎಂದು ಅನಿಸಬಹುದು. ಆದರೆ ಹಾಗೆ ಮಾಡಿದರೆ ಅದು ನಮ್ಮದಾಗದು. ಕಾಪಿರೈಟ್‌ ಇರುವ ಚಿತ್ರವನ್ನು ಹಣ ಕೊಟ್ಟು ಎಷ್ಟು ಮಂದಿ ಬೇಕಾದರೂ ಖರೀದಿಸಬಹುದು. ಆದರೆ ಅದರ ಮೌಲ್ಯ ನೀಡಿ ಒಬ್ಬ ಮಾತ್ರವೇ ಖರೀದಿಸಬಹುದು.

ಎನ್‌ಎಫ್‌ಟಿಗಳನ್ನು ಬದಲಾಯಿಸಲಾಗದಿರುವುದು ಎಂಬುದಾಗಿ ಪರಿಗಣಿಸಲಾಗಿದೆ, ಏಕೆಂದರೆ ಅದು ಅನನ್ಯ ಅಂಶಗಳನ್ನು ಒಳಗೊಂಡಿವೆ, ಹಾಗಾಗಿ ಅದನ್ನು ಬೇರೆ ಯಾವುದೇ ಸರಕು ಇಲ್ಲವೇ ಸ್ವತ್ತಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಇದು ಒಂದು ಮನೆಯಾಗಿರಬಹುದು ಇಲ್ಲವೇ ಚಿತ್ರಕಲೆಯಾಗಿರಬಹುದು. ನೀವು ಚಿತ್ರಕಲೆಯ ಫೋಟೋ ತೆಗೆಯಬಹುದು ಅಥವಾ ಅದರ ಪ್ರಿಂಟ್ ಖರೀದಿಸಬಹುದು. ಆದರೆ ಮೂಲ ಚಿತ್ರಕಲೆ ಒಂದೇ ಆಗಿರುತ್ತದೆ. ಅದಕ್ಕೆ ಸಮಾನವಾದುದು ಇನ್ನೊಂದಿರುವುದಿಲ್ಲ.

ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.

NFTಯಲ್ಲಿ ಬಿಡುಗಡೆಯಾಲಿವೆ ಈ ಸಿನಿಮಾಗಳು?

ಕೆಜಿಎಫ್ ಬಳಿಕ NFT ವಲಯಕ್ಕೆ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ರಾಕೆಟ್ರಿ ಪ್ರವೇಶಿಸಿದೆ. ಇದಾದ ಬಳಿಕ ಲಾಲ್ ಸಿಂಗ್ ಚಡ್ಡಾ, ಸಲಾರ್, ಆದಿಪುರುಷ, ಬ್ರಹ್ಮಾಸ್ತ್ರ ಸೇರಿದಂತೆ ಹಲವು ಸಿನಿಮಾಗಳು ಎಂಟ್ರಿ‌ ಕೊಡಲಿವೆ ಎನ್ನಲಾಗ್ತಿದೆ. ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ಚಿತ್ರರಂಗ ಕೂಡ NFT ಮಾರುಕಟ್ಟೆಯನ್ನು‌ ನಿರೀಕ್ಷಿಸುತ್ತಿದೆ. ಮೆಟಾವರ್ಸ್ ಮೂಲಕ ತಮ್ಮ ನೆಚ್ಚಿನ ಸ್ಟಾರ್ಸ್ ಭೇಟಿಯಾಗಲು‌ ಫ್ಯಾನ್ಸ್ ಕಾತುರರಾಗಿದ್ದಾರೆ. ದುಬೈ ಟೆಕ್ ಕಂಪನಿಯೊಂದು ಇಂಡಿಯನ್ ಸ್ಟಾರ್ ಜೊತೆ ಕೈ ಜೋಡಿಸಿದ್ದು, NFT ಮಾರುಕಟ್ಟೆಗೆ ಕನ್ನಡ ಚಿತ್ರರಂಗ ಉತ್ತಮ ವೇದಿಕೆಯಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಿಯಾಲಿಟಿ ಶೋಗಳ ತವರು ಸ್ಟಾರ್ ಸುವರ್ಣ ವಾಹಿನಿ!

Previous article

ಕಮರ್ಷಿಯಲ್ ಮ್ಯೂಸಿಕಲ್ ಲವ್ ಸ್ಟೋರಿ ಇದರಲ್ಲಿದೆ…!

Next article

You may also like

Comments

Comments are closed.