ವಿಕಾಸ್ ಪುಷ್ಪಗಿರಿ ಅವರ ನಿರ್ದೇಶನದಲ್ಲಿ ಹಾಗೂ ವಿನಯ್ಕುಮಾರ್ ಅವರ ನಿರ್ಮಾಣ ಸಾರಥ್ಯದಲ್ಲಿ ತಯಾರಾಗಿರುವ ‘ನ್ಯೂರಾನ್‘ ಚಿತ್ರದ ಆಡಿಯೋವನ್ನು ಇತ್ತೀಚೆಗೆ ನಟ ದರ್ಶನ್ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿಶೇಷವಾದ ಸೈಂಟಿಫಿಕ್ ಫಿಕ್ಷನ್ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿ ಚಿತ್ರದ ೪ ಹಾಡುಗಳಿಗೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವ್ ಟ್ರ್ಯಾಕ್ ಜೊತೆಗೆ ಮೈಂಡ್ಗೇಮ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಯುವ ನಾಯಕನಾಗಿ ಅಭಿನಯಿಸಿದ್ದು, ನೇಹಾ ಪಾಟೀಲ್, ವೈಷ್ಣವಿ ಮೆನನ್ ಹಾಗೂ ಶಿಲ್ಪಾ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ಉಳಿದಂತೆ ಜೈಜಗದೀಶ್, ವರ್ಷ, ಅರವಿಂದ್ರಾವ್, ಕಬೀರ್ ದುಹಾನ್ಸಿಂಗ್, ರಾಕ್ಲೈನ್ ಸುಧಾಕರ್ ಅಭಿನಯಿಸಿದ್ದಾರೆ.

ನಾಯಕ ಯುವ ಇಲ್ಲಿ ನರ್ವ್ಗೆ ಸಂಬಂಧಿಸಿದ ಕಥೆ ಹೇಳೋ ಪಾತ್ರದಲ್ಲಿ ನಟಿಸಿzರೆ. ಇನ್ನು ನೇಹಾ ಪಾಟೀಲ್ ಸೋಶಿಯಲ್ಸರ್ವಿಸ್ ಮಾಡೋ ಯುವತಿಯಾಗಿzರೆ. ನ್ಯೂರಾನ್ ಒಂದು ನೈಜಘಟನೆ ಆಧಾರಿತ ಸಿನಿಮಾವಾಗಿದೆ. ಈ ಚಿತ್ರದ ರಶ್ಮಿಕಾ ಅನ್ನೋ ಸಾಂಗ್ ಸಖತ್ ಸೌಂಡ್ ಮಾಡುತ್ತಿದೆ.

ಈ ವೇಳೆ ನಟ ದರ್ಶನ್ ಮಾತನಾಡಿ, ನಾವು ಕೂಡ ಮೊದಲು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟಾಗ ಹೊಸಬರಾಗಿದ್ವಿ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಂಡು ಈ ಸಿನಿಮಾದಲ್ಲಿ ಕೆಲಸ ಮಾಡಿದ ಹೊಸಬರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಹೊಸಬರಿಂದ ನಾವು ಕಲಿಯೋದು ಬೇಕಾದಷ್ಟಿರುತ್ತದೆ. ಹಾಗೇ ನಮ್ಮಿಂದ ನೀವು ಕಲಿಯುತ್ತಿರಿ ಎಂದು ಹೇಳಿದರು. ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ ಹೊಸಬರು ಒಂಥಾರ ಆಕ್ಸಿಜನ್ ಇದ್ದಹಾಗೆ. ಇಲ್ಲಿ ನಿರ್ಮಾಪಕರು, ಡೈರೆಕ್ಟರ್, ಹೀರೋ ಎಲ್ಲರೂ ಹೊಸಬರಾಗಿದ್ದರೂ ಅವರಲ್ಲಿ ಏನೋ ಹೊಸತನವಿತ್ತು. ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು. ಈ ಚಿತ್ರದಲ್ಲಿ ಕಬೀರ್ದುಹಾನ್ಸಿಂಗ್ ಹಾಗೂ ಜೈಜಗದೀಶ್ ಕೂಡ ನಟಿಸಿದ್ದಾರೆ. ನ್ಯೂರಾನ್ ಎಂಬ ವಿಭಿನ್ನ ಶೀರ್ಷಿಕೆಯಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರಕ್ಕೆ ಹೈದರಾಬಾದ್ನ ಶೋಯಬ್ ಅಹಮದ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಕಲಾನಿರ್ದೇಶನವಿದೆ. ಡಾ|| ವಿ.ನಾಗೇಂದ್ರ ಪ್ರಸಾದ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಚಿತ್ರದ ಸಂಭಾಷಣೆ ಬರೆದಿದ್ದಾರೆ.