ಲೋಕೇಂದ್ರ ಸೂರ್ಯ ನಿರ್ದೇಶನ ಮಾಡಿ ನಟಿಸಿರುವ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಖಂಡ ಎಪ್ಪತ್ತರಷ್ಟು ಸಿನಿಮಾಗಳ ರೇಸಿನಲ್ಲಿ ಗೆದ್ದು ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ.
ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂಡಿಯನ್, ಏಷ್ಯನ್ ಮತ್ತು ಕನ್ನಡ ವಿಭಾಗಳಿರುತ್ತವೆ. ಇದರಲ್ಲಿ ಕನ್ನಡ ವಿಭಾಗದಲ್ಲಿ ಸರಿಸುಮಾರು ಎಪ್ಪತ್ತು ಚಿತ್ರಗಳು ರೇಸಿನಲ್ಲಿದ್ದವು. ಅದರಲ್ಲಿ ಆಯ್ಕಯಾದ ಹದಿನಾರು ಚಿತ್ರಗಳಲ್ಲಿ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರವೂ ಸೇರಿಕೊಂಡಿದೆ. ಇದು ಭಿನ್ನ ಕಥಾ ಹಂದರ ಹೊಂದಿರೋ ಈ ಸಿನಿಮಾದ ಆರಂಭಿಕ ಗೆಲುವೆಂಬುದರಲ್ಲಿ ಸಂದೇಹವೇನಿಲ್ಲ.
ಯಾಕೆಂದರೆ ಈ ಚಿತ್ರವನ್ನ ವೀಕ್ಷಿಸಿದ ಜ್ಯೂರಿ ಸದಸ್ಯರೆಲ್ಲ ಖುಷಿಗೊಂಡು ಮೆಚ್ಚಿಕೊಂಡಿದ್ದಾರೆ. ಇದರೊಂದಿಗೆ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಸೂಚನೆಗಳೂ ಸಿಕ್ಕಿವೆ. ಕನ್ನಡದ ಮಟ್ಟಿಗೆ ನವೀನ ಪ್ರಯೋಗದ, ಅಪರೂಪದ ಕಥೆ ಹೊಂದಿರೋ ಈ ಚಿತ್ರ ಬಿಡುಗಡೆಗೆ ತಯಾರಾಗಿದೆ. ಇದು ಜ್ಯೂನಿಯರ್ ಉಪೇಂದ್ರ ಎಂದೇ ಕರೆಸಿಕೊಳ್ಳೋ ಲೋಕೇಂದ್ರ ಸೂರ್ಯ ನಿರ್ದೇಶನದ ಮೊದಲ ಚಿತ್ರ. ನಟನಾಗಿ, ನಿರ್ದೇಶಕನಾಗಿ ಮತ್ತು ಕಥೆಗಾರನಾಗಿ ಅವರೀಗಲೇ ಭರವಸೆ ಹುಟ್ಟಿಸಿದ್ದಾರೆ.
#
No Comment! Be the first one.