ನೈಸ್ ರೋಡ್ ಕನ್ನಡ ಸಿನಾಮಾಕ್ಕೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ. ನೈಸ್ ರೋಡ್ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೇಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ.
ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ನೈಸ್ ರೋಡ್ ಎಂಬ ಹೆಸರಿನಿಂದನೆ ಪ್ರಚಾರವಾಗಿದೆ ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚುವೆಚ್ಚಗಳಾಗುವುದು ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ.
ಆದರೆ ಈಗ ನೈಸ್ ರೋಡ್ ಕಂಪನಿಯವರು ಏಕಏಕಿ ಬಂದು ಹೆಸರು ಬದಲಾಯಿಸಲೇ ಬೇಕೆಂದು ನೋಟೀಸ್ ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಅವರು.. ಈ ಸಿನಿಮಾಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಸಿನಿಮಾತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡೊತರೋ ಕಾದು ನೋಡಬೇಕಿದೆ.
No Comment! Be the first one.