ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪತಿ ಹಾಗೂ ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಸದ್ಯ ಇಂಡಿಯನ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೆಲೆಬ್ರೆಟಿಯಾಗಿದ್ದಾರೆ. ತಮ್ಮ ದಿನನಿತ್ಯದ ಚಟುವಟಿಕೆ ಕುರಿತು ನಿಕ್ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸದ್ಯ ನೋಡುಗರು ತಮ್ಮ ಮೇಲೆ ಮಾಡಿದ್ದ ಮೀಮ್ವೊಂದನ್ನು ನಿಕ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಯೆಸ್.. ಬಾಲಿವುಡ್ ನಟ ಗೋವಿಂದ ಅವರ 1995ರ ಹಿಟ್ ಫಿಲ್ಮ್, ಕೂಲಿ ನಂಬರ್ 1 ಹಾಗೂ ನಿಕ್ ಜೋನಸ್ರ ಓನ್ಲಿ ಹ್ಯೂಮನ್ ವಿಡಿಯೋ ಲುಕ್ಗಳನ್ನು ಕಂಪೇರ್ ಮಾಡಿ ಈ ಮೀಮ್ ಮಾಡಲಾಗಿದೆ. ಇದನ್ನ ತಮ್ಮ ಖಾತೆಯ ಸ್ಟೇಟಸ್ನಲ್ಲಿ ಹಂಚಿಕೊಂಡಿರೋ ನಿಕ್, ಅಕ್ಯೂರೆಟ್ ಅಂತ ಹೇಳಿದ್ದಾರೆ. ಇದನ್ನ ನೋಡಿದ್ರೆ ಇಬ್ಬರೂ ಡಿಟ್ಟೋ ಒಂದೇ ಥರ ಕಾಣಿಸುತ್ತಿದ್ದಾರೆ.
No Comment! Be the first one.