ಮುಸುರಿ ಕೃಷ್ಣಮೂರ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ನಿಗರ್ವ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಬೆಂಗಳೂರು, ಹೊನ್ನಾವರದಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಸ್ಕೈಲೇನ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಆರಂಭವಾಗಲಿದೆ.
ಜಯಸಿಂಹ ಮುಸುರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುದತ್ ಮುಸುರಿ ಅವರ ಛಾಯಗ್ರಹಣವಿದೆ. ಜಯಸಿಂಹ ಮುಸುರಿ ಅವರಿಗೆ ಸಹ ನಿರ್ದೇಶಕನಾಗಿ ತ್ಯಾಗರಾಜ್ ಗೌರಿಬಿದನೂರು ಸಾಥ್ ನೀಡಿದ್ದಾರೆ ವಿನು ಮನಸು ಸಂಗೀತ ನಿರ್ದೇಶನ, ನಾಗೇಂದ್ರ ಅರಸ್ ಸಂಕಲನ, ಡ್ಯಾನ್ಸ್ ಕಿಟ್ಟಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಬುಲೆಟ್ ವಿನು, ಕೃಷ್ಣೇಗೌಡ, ಆರ್ಯನ್ ಸೂರ್ಯ ಭಾರತಿ ಹೆಗಡೆ, ಹರ್ಷಿತಾ ಗೌಡ, ರತ್ನಕುಮಾರಿ, ರಂಜಿತಾ ರಾವ್, ಅಶ್ವಿನಿ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.