ವರದನಾಯಕ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ನಾಯಕಿಯಾಗಿ ನಟಿಸಿರುವ ನಿಕೇಶಾ ಪಟೇಲ್ ಮುಂದೆ ನರಸಿಂಹ, ಡಕೋಟ ಪಿಕ್ಚರ್, ನಮಸ್ತೇ ಮೇಡಂ, ಅಲೋನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಸಿನಿ ಯಾನ ಕೇವಲ ಕನ್ನಡ ಭಾಷೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ತೆಲುಗು ಮತ್ತು ತಮಿಳಿನಲ್ಲೂ ನಿಕೇಶಾ ಬಣ್ ಹಚ್ಚಿದ್ದಾರೆ. ತಮಿಳಿನ ತಲೈವನ್, ಕರೈಯೋರಂ, ನಾರದನ್, 7 ನಾಟ್ಕಲ್, ಭಾಸ್ಕರ್ ಒರು ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್ ಸದ್ಯ ಎಝಿಲ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಇದೆಲ್ಲದರ ನಡುವೆ ಇನ್ನೊಂದು ಬಿಸಿ ಬಿಸಿ ಸುದ್ದಿ ಕೇಳಿ ಬಂದಿದ್ದು, ಇತ್ತೀಚೆಗೆ ಮುಂಬೈ ಆಸ್ಪತ್ರೆಯಲ್ಲಿ ನಿಕೇಶಾ ಪಟೇಲ್ಗೆ ಗುಟ್ಟಾಗಿ ಆಪರೇಷನ್ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ.  ಸುದ್ದಿ ಅಕ್ಷರಶಃ ನಿಜವಾಗಿದ್ದು, ಸ್ವತಃ ನಿಕೇಶಾ ಅವರೇ ಅದನ್ನು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ‌. ‘ನನಗೆ ಸಣ್ಣ ಆಪರೇಷನ್ ಆಗಿದ್ದು ನಿಜ. ಆದರೆ ನಾನೀಗ ಚೆನ್ನಾಗಿಯೇ ಇದ್ದೇನೆ. ಎಝಿಲ್ ಚಿತ್ರದಲ್ಲಿನ ತನ್ನ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೊಸ ಪ್ರಾಜೆಕ್ಟ್ಗಾಗಿ ನಿರೀಕ್ಷಿಸುತ್ತಿದ್ದೇನೆಎಂದು ಟ್ವೀಟ್ ಮಾಡಿದ್ದಾರೆ.

CG ARUN

ರಿಮೇಕ್ ಸಿನಿಮಾಗಳ ಮೊರೆ ಹೋದ ಹ್ಯಾಟ್ರಿಕ್ ಹೀರೋ!

Previous article

ಬಿಗ್ ಯಾಕೆ ಹೀಗೆ ಮಾಡಿ ಹಾಗೆ ಅಂದ್ರು!

Next article

You may also like

Comments

Leave a reply

Your email address will not be published. Required fields are marked *

More in cbn