ಈಗೀಗ ಸ್ಯಾಂಡಲ್ ವುಡ್ ನಲ್ಲಿ ಈ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಆದ ಜಮಾನದ ಸಿನಿಮಾಗಳನ್ನು ಮರುಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದೆ. ಸಾಕಷ್ಟು ಸಿನಿಮಾಗಳನ್ನು ರಿಲೀಸ್ ಮಾಡಿರುವ ಚಿತ್ರತಂಡಗಳು ಸದ್ಯ 1993ರಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ ‘ನಿಷ್ಕರ್ಷ’ ವನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.
ಸೃಷ್ಠಿ ಫಿಲಂಸ್ ನಿರ್ಮಾಣದಡಿಯಲ್ಲಿ ತಯಾರಾದ ಈ ಸಿನೆಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಾಯಕ ನಟನಾಗಿ ಅಭಿನಯಿಸಿದ್ದರು. ಒಂದೇ ಲೊಕೇಶನ್ನಲ್ಲಿ ಚಿತ್ರಿತಗೊಂಡ ಈ ಕನ್ನಡದ ಸಿನಿಮಾ ಇಡೀ ದೇಶ ಬಾರಿ ಸದ್ದು ಮಾಡಿತ್ತು. ಇನ್ನು ಈ ಚಿತ್ರಕ್ಕೆ 3 ರಾಜ್ಯ ಪ್ರಶಸ್ತಿಗಳು ಸಂದಿದ್ದವು. ಇದೀಗ ಈ ಸಿನಿಮಾ ಮತ್ತೊಮ್ಮೆ ಕಮಾಲ್ ಮಾಡಲು ಬರುತ್ತಿದ್ದು, ಡಾ. ವಿಷ್ಣುವರ್ಧನ್ ನಟನೆಯ ನಾಗರ ಹಾವು ಸಿನಿಮಾ ಡಿಜಿಟಲ್ ಅವತಾರ ಪಡೆದು ರಿಲೀಸ್ ಆಗಿ ಹೊಸ ಇತಿಹಾಸ ಬರೆದ ಬೆನ್ನಲ್ಲೇ ಮತ್ತೊಮ್ಮೆ ದಾದಾ ಅವರ ಸಿಸಿಮಾ ಇತಿಹಾಸ ಬರೆಯಲು ಸಿದ್ಧವಾಗಿದೆ. ಸೆಪ್ಟೆಂಬರ್ 20 ರಂದು ನಿಷ್ಕರ್ಷ ಸಿನಿಮಾ ರಾಜ್ಯದಾದ್ಯಂತ ಮತ್ತೊಮ್ಮೆ ಬಿಡುಗಡೆಯಾಗಲಿದೆ. ನಿಷ್ಕರ್ಷ ತಾರಾಗಣದಲ್ಲಿ ಅನಂತ್ನಾಗ್, ಬಿ.ಸಿ ಪಾಟೀಲ್, ರಮೇಶ್ ಭಟ್, ಅಂಜನಾ, ಅವಿನಾಶ್, ಪ್ರಕಾಶ್ ರೈ, ಸುಮನ್ ನಗರಕರ್ ಅಭಿನಯಿಸಿದ್ದಾರೆ.