ಕೆಲವು ದಿನಗಳ ಹಿಂದಷ್ಟೇ ನಿತ್ಯ ಮೆನನ್ ಕೆಲ ಸಿನಿಮಾ ನಿರ್ಮಾಪಕರನ್ನು ಅವಮಾನಿಸಿದ್ದಾರೆ ಎಂದು ನಿತ್ಯಾ ಮೆನನ್ ರವರನ್ನು ಮಲಯಾಳಂ ಸಿನಿಮಾಗಳಿಂದ ಬ್ಯಾನ್ ಮಾಡಬೇಕೆಂಬ ಹುನ್ನಾರವೂ ನಡೆಯುತ್ತಿತ್ತು.
ಏನ್ ಕಿರಿಕ್ಕು..!
ಬಹುಮುಖ ಪ್ರತಿಭೆಯ ನಿತ್ಯಾ ಮೆನನ್ ನವರು ಸದ್ಯ ನಿರ್ಮಾಪಕರೊಂದಿಗಿನ ಚಕಮಕಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ನಿತ್ಯಾ ಮೆನನ್ ರವರ ತಾಯಿಗೆ ಕ್ಯಾನ್ಸರ್ ಇರುವುದಾಗಿ ಸುದ್ದಿ ಬಂದಿತ್ತು. ಅದು ಮೂರನೇ ಹಂತದಲ್ಲಿಯೂ ಇತ್ತು. ಇನ್ನು ನಿತ್ಯಾರವರು ಬಹುಕಾಲದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಪಡೆಯಲು ನಿರ್ಧರಿಸಿದ್ದ ನಿತ್ಯಾ ಮನೆಯಲ್ಲಿ ಉಳಿದರು. ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ ನಿತ್ಯಾ ಅರೆತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು.
ಆಗ ಮಲೆಯಾಳಂ ನಿರ್ಮಾಪಕರು ನಿತ್ಯಾ ಮೆನನ್ ಅನುಮತಿಯಿಲ್ಲದೇ ದಿಢೀರನೇ ಮನೆಗೆ ಧಾವಿಸಿ ಅಪ್ ಕಮಿಂಗ್ ಸಿನಿಮಾದಲ್ಲಿ ಮಾತನಾಡುವುದಕ್ಕೆ ಮುಂದಾದರಂತೆ. ಆಗ ನಿತ್ಯಾ ಈಗ ಸದ್ಯಕ್ಕೆ ನನ್ನ ಆರೋಗ್ಯ ಸರಿ ಇಲ್ಲ. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಮಾತನಾಡೋಣ ಎಂದರಂತೆ. ಆದರೆ ಅವರ ಮಾತಿಗೆ ಸಿಟ್ಟಿಗೆದ್ದ ನಿರ್ಮಾಪಕರುಗಳು ಆಕೆಗೆ ಅಹಂಕಾರ ಜಾಸ್ತಿ ಎಂದೂ ಸಿಟ್ಟಾದರಂತೆ. ಈ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದ್ದ ನಿತ್ಯಾ ನನಗೆ ಅಹಂಕಾರವಿಲ್ಲ. ಅಂತಹ ಅಹಂಕಾರವಿರುವ ನಿರ್ಮಾಪಕರ ಜತೆಗೆ ನಾನು ಮಾತನಾಡಲು ಇಚ್ಚಿಸುವುದಿಲ್ಲ. ಎಂದರು.
No Comment! Be the first one.