ಕನ್ನಡದ ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ನಿತ್ಯಾ ಮೆನನ್. ಅದಾದಮೇಲೆ ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ಅವರು ಮಿಷನ್ ಮಂಗಲ್ ಚಿತ್ರದ ಮೂಲಕ ಹಿಂದಿಗೂ ಪದಾರ್ಪಣೆ ಮಾಡಿದ್ದಾರೆ. ಅಲ್ಲದೇ ನಿತ್ಯಾ ತಮಿಳಿನಲ್ಲಿ ನಟಿಸಿದ್ದ ಓ ಕಾದಲ್ ಕಣ್ಮಣಿ ಚಿತ್ರವೂ ಹಿಂದಿಯಲ್ಲಿ ಓಕೆ ಜಾನು ಹೆಸರಿನಲ್ಲಿ ರಿಮೇಕ್ ಕೂಡ ಆಗಿದೆ.
ತನ್ನ ಅಮೋಘ ನಟನೆಯಿಂದ ಮೂರು ಬಾರಿ ಫಿಲಂ ಫೇರ್ ನಲ್ಲಿ ಅತ್ಯುತ್ತಮ ನಾಯಕಿ ಪ್ರಶಸ್ತಿಯನ್ನು ಪಡೆದಿರುವ ನಿತ್ಯಾ ಮೆನನ್ ಬಾಲಿವುಡ್ ನ ಮಿಷನ್ ಮಂಗಲ್ ಚಿತ್ರದ ನಂತರ ಬಾಲಿವುಡ್ ನಲ್ಲಿಯೇ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಅವಕಾಶಗಳು ಬಂದರೂ ಸಹ ಪಾತ್ರಗಳ ಆಯ್ಕೆಯಲ್ಲಿ ನಿತ್ಯಾ ಜಾಗ್ರತೆಯನ್ನು ವಹಿಸುತ್ತಿದ್ದಾರಂತೆ. ಮಿಷನ್ ಮಂಗಲ್ ಸಿನಿಮಾವನ್ನು ಒಪ್ಪಿಕೊಳ್ಳುವಾಗಲೂ ಇದೇ ರೂಲ್ಸ್ ಫಾಲೋ ಮಾಡಿದ್ದ ನಿತ್ಯಾ ಬಾಲಿವುಡ್ ಸಿನಿಮಾ ಅಂದ ಮಾತ್ರಕ್ಕೆ ನನ್ನ ಪ್ರಿನ್ಸಿಪಲ್ ಹೇಗೆ ಬಿಡಲಿ ಎನ್ನುತ್ತಾರೆ.