ಬಾಲಕೃಷ್ಣ ಅಭಿನಯದ ’ಎನ್ಟಿಆರ್’ ಬಯೋಪಿಕ್ನ ಪಾರ್ಟ್ ೨ ಇದೇ ೨೨ರಂದು ತೆರೆಕಾಣುತ್ತಿದೆ. ಇದೀಗ ಬಿಡುಗಡೆಯಾಗಿರುವ ಟ್ರೈಲರ್ನಲ್ಲಿನ ಒಂದು ಸಿಲ್ಲಿ ಮಿಸ್ಟೇಕ್ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ. ಸನ್ನಿವೇಶವೊಂದರಲ್ಲಿ ರಾಣಾ ದಗ್ಗುಬಾಟಿ (ಚಂದ್ರಬಾಬುನಾಯ್ಡು ಪಾತ್ರ) ಎದುರು ನಿಂತ ಪಾತ್ರಧಾರಿ ಜೊತೆ ಮಾತನಾಡುತ್ತಾರೆ. ರಾಣಾ ಹಿನ್ನೆಲೆಯಲ್ಲಿ ಗೋಡೆ ಮೇಲೆ ನಿಜವಾದ ಎನ್ಟಿಆರ್ ಫೋಟೋ ಕಾಣಿಸುತ್ತದೆ. ಇಲ್ಲಿ ಎನ್ಟಿಆರ್ ಪಾತ್ರಧಾರಿ ಬಾಲಕೃಷ್ಣ ಅವರ ಫೋಟೋ ಇರಬೇಕಿತ್ತಲ್ಲವೇ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಮತ್ತೊಂದೆಡೆ ನಿರ್ದೇಶಕ ಕ್ರಿಷ್ ಬೇಕೆಂದೇ ಎನ್ಟಿಆರ್ ಫೋಟೋ ತೂಗು ಹಾಕಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದೊಂದು ರೀತಿ ಕ್ರಿಯಾಶೀಲತೆ ಮಾತ್ರವಲ್ಲದೆ, ಪ್ರಚಾರದ ತಂತ್ರವೂ ಇರಬಹುದು ಎಂದೂ ಹೇಳಲಾಗುತ್ತಿದೆ.
ಸೆನ್ಸಾರ್ನಿಂದ ’ಯು’ ಸರ್ಟಿಫಿಕೇಟ್ ಪಡೆದಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಂದಮೂರಿ ಕಲ್ಯಾಣ್ ರಾಮ್ (ಹರಿಕೃಷ್ಣ ಪಾತ್ರದಲ್ಲಿ), ರಾಣಾ ದಗ್ಗುಬಾಟಿ (ಚಂದ್ರಬಾಬು ನಾಯ್ಡು), ಸುಮಂತ್ (ಎಎನ್ಆರ್) ನಟಿಸಿದ್ದಾರೆ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ತಿಂಗಳ ಹಿಂದೆ ತೆರೆಕಂಡಿದ್ದ ’ಎನ್ಟಿಆರ್ ಕಥಾನಾಯಕುಡು’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಫಲವಾಗಿತ್ತು. ಇದರಿಂದ ವಿತರಕರು ಅಪಾರ ನಷ್ಟ ಅನುಭವಿಸಿದ್ದರು. ಚಿತ್ರ ನಿರ್ಮಾಪಕರೂ ಆಗಿರುವ ನಟ ಬಾಲಕೃಷ್ಣ ನಷ್ಟದ ಮೂರನೇ ಒಂದು ಭಾಗವನ್ನು ತಾವು ಭರಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಪಾರ್ಟ್ ೨ (ಮಹಾನಾಯಕುಡು) ವಿತರಣೆಯಲ್ಲಿ ವಿನಾಯ್ತಿ ಕೊಡುವ ಭರವಸೆ ನೀಡಿದ್ದಾರೆ. ಮೊದಲ ಭಾಗದಲ್ಲಿ ಎನ್ಟಿಆರ್ ಸಿನಿಮಾ ಕತೆ ನಿರೂಪಿಸಿದ್ದರೆ, ೨೨ರಂದು ತೆರೆಕಾಣುತ್ತಿರುವ ಎರಡನೇ ಭಾಗದಲ್ಲಿ ಅವರ ರಾಜಕೀಯ ಬದುಕಿನ ಚಿತ್ರಣವಿದೆ.
#
No Comment! Be the first one.