ಜೂನಿಯರ್ ಎನ್ ಟಿ ಆರ್ ಸಹೋದರ ನಂದಮೂರಿ ಕಲ್ಯಾಣರಾಮ್ 118 ಸಿನಿಮಾದ ಯಶಸ್ಸಿನ ಬಳಿ ಎಂಥ ಮಂಚಿವಾಡವುರ ಚಿತ್ರದಲ್ಲಿ ನಟಿಸುತ್ತಿರೋದು ಎಲ್ಲರಿಗೂ ತಿಳಿದ ಸಂಗತಿಯೇ. ಈಗಾಗಲೇ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಮುಂದಿನ ಪೊಂಗಲ್ ಗೆ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತಾದರೆ 2020ರ ಜನವರಿಗೆ ಎಂಥಾ ಮಂಚಿವಾಡುವುರ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.
ಎಂಥ ಮಂಚಿವಾಡವುರ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರವಾಗಿದ್ದು, ಶತಮಾನಂಭವತಿ ಫೇಮ್ ನ ಸತೀಶ್ ವೆಗೆಸ್ನಾ ನಿರ್ದೇಶನ ಮಾಡಿದ್ದಾರೆ. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿವಲೆಂಕಾ ಕೃಷ್ಣ ಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನರೇಶ್, ಸುಹಾಸಿನಿ, ತನಿಕೆಲ್ಲಾ ಭರಣಿ, ಪವಿತ್ರಾ ಲೋಕೇಶ್, ರಾಜೀವ್ ಕಣಕಾಲ, ವೆನ್ನೆಲ್ಲಾ ಕಿಶೋರ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ‘ಗೀತ ಗೋವಿಂದಂ’ ಖ್ಯಾತಿಯ ಗೋಪಿ ಸುಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದು ರಾಜ್ ತೋಟ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
No Comment! Be the first one.