“ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ಒಡೆಯ ಚಿತ್ರದ ಮೋಶನ್ ಪೋಸ್ಟರ್ ಅನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ. ಇಷ್ಟರಲ್ಲೇ ನಿಮಗೆ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಎನ್ನುವ ಸಂದೇಶವೊಂದನ್ನು ರವಾನಿಸಿ ನಿರ್ಮಾಪಕ ಸಂದೇಶ್ ಸುಮ್ಮನಾಗಿದ್ದಾರೆ. ಇತ್ತ ಇವತ್ತು ‘ಬಾಸ್ ಸಿನಿಮಾ ಪೋಸ್ಟರ್ ಬರತ್ತೆ ಅಂತಾ ಕಾದು ಕುಂತಿದ್ದ ದರ್ಶನ್ ಅವರ ಅಭಿಮಾನಿಗಳು ಪೆಚ್ಚು ಮೋರೆ ಹಾಕಿಕೊಂಡು ಸಪ್ಪಗಾಗಿದ್ದಾರೆ.

ಕೆಲವು ದೊಡ್ಡ ಬ್ಯಾನರ್ಗಳಿಗೆ ಸ್ಟಾರ್ಗಳ ಡೇಟುಗಳಷ ಮುಖ್ಯ. ಹೀರೋಗಳ ಕಾಲ್ಶೀಟು ಪಡೆಯೋದಷ್ಟೇ ಕೆಲವರ ಪಾಲಿಗೆ ಸಾಧನೆ. ನಂತರ ಆ ಹೀರೋ ಮತ್ತು ಅವರ ವರ್ಚಸ್ಸಿಗೆ ತಕ್ಕಂತಾ ಸಿನಿಮಾ ಮಾಡಬೇಕು, ಪ್ರಚಾರ ನೀಡಬೇಕು ಅನ್ನೋ ಯಾವ ಕಾಳಜಿಯೂ ಇರೋದಿಲ್ಲ. ಒಡೆಯ ಸಿನಿಮಾದ ಪೋಸ್ಟರ್ ಡಿಸೈನುಗಳನ್ನು ನೋಡಿದರೆ ಇದು ನಿಜಕ್ಕೂ ‘ಸೂಪರ್ ಸ್ಟಾರ್ ಸಿನಿಮಾದ ಪೋಸ್ಟರಾ? ಅನ್ನಿಸುವಂತಿವೆ. ಮಾಸಲು ಮಾಸಲಾಗಿರುವ ವಿನ್ಯಾಸಗಳು, ದರ್ಶನ್ ಅವರ ಮುಖ ಸ್ಪಷ್ಟವಾಗಿ ಕಾಣದ ಫೋಟೋ ಯಾರಿಗೂ ಇಷ್ಟವಾಗಿಲ್ಲ. ದರ್ಶನ್ ಆನೆ ಮೇಲೆ ಕುಳಿತು ಬರುತ್ತಿರುವ ಫೋಟೋದಲ್ಲಂತೂ ಅವರ ಕಣ್ಣು, ಮುಖ ಕ್ಲಿಯರ್ ಆಗಿ ಕಾಣುತ್ತಲೇ ಇಲ್ಲ.
ಕುರುಕ್ಷೇತ್ರದಲ್ಲಿ ಮುನಿರತ್ನ ಕೂಡಾ ಹೀಗೇ ಮಾಡಿದ್ದರು. ಆರಂಭದಲ್ಲಿ ಐವತ್ತು ವರ್ಷಗಳ ಹಿಂದಿನ ಸಿನಿಮಾದಂತೆ ಕಾಣುವ ಹಳೇ ಶೈಲಿಯಲ್ಲಿ ಪೋಸ್ಟರುಗಳನ್ನು ವಿನ್ಯಾಸ ಮಾಡಿಸಿದ್ದರು. ಅದನ್ನು ನೋಡಿದ ಅಭಿಮಾನಿಗಳು ಭ್ರಮನಿರಸನಗೊಂಡು, ಬೇಸರ ವ್ಯಕ್ತಪಡಿಸಿದ್ದರು. ನಂತರ ತಪ್ಪಿನ ಅರಿವಾದವರಂತೆ ಪ್ರೊಫೆಷನಲ್ ಪೋಸ್ಟರ್ ಡಿಸೈನರುಗಳಿಗೆ ಕೊಟ್ಟು ಸುಂದರವಾದ, ಇವತ್ತಿನ ಟ್ರೆಂಡ್ಗೆ ತಕ್ಕಂತಾ ಪೋಸ್ಟರುಗಳನ್ನು ರೂಪಿಸಿದ್ದರು.
ಕುರುಕ್ಷೇತ್ರದಲ್ಲಿ ಮುನಿರತ್ನ ಕೂಡಾ ಹೀಗೇ ಮಾಡಿದ್ದರು. ಆರಂಭದಲ್ಲಿ ಐವತ್ತು ವರ್ಷಗಳ ಹಿಂದಿನ ಸಿನಿಮಾದಂತೆ ಕಾಣುವ ಹಳೇ ಶೈಲಿಯಲ್ಲಿ ಪೋಸ್ಟರುಗಳನ್ನು ವಿನ್ಯಾಸ ಮಾಡಿಸಿದ್ದರು. ಅದನ್ನು ನೋಡಿದ ಅಭಿಮಾನಿಗಳು ಭ್ರಮನಿರಸನಗೊಂಡು, ಬೇಸರ ವ್ಯಕ್ತಪಡಿಸಿದ್ದರು. ನಂತರ ತಪ್ಪಿನ ಅರಿವಾದವರಂತೆ ಪ್ರೊಫೆಷನಲ್ ಪೋಸ್ಟರ್ ಡಿಸೈನರುಗಳಿಗೆ ಕೊಟ್ಟು ಸುಂದರವಾದ, ಇವತ್ತಿನ ಟ್ರೆಂಡ್ಗೆ ತಕ್ಕಂತಾ ಪೋಸ್ಟರುಗಳನ್ನು ರೂಪಿಸಿದ್ದರು.

ಕೆಲಸಗಾರರಿಗೆ ಸರಿಯಾಗಿ ಕಾಸು ಕೊಟ್ಟರೆ ಒಳ್ಳೇ ಪ್ರಾಡಕ್ಟೇ ಕ್ರಿಯೇಟ್ ಆಗುತ್ತದೆ. ಇವತ್ತು ತಂತ್ರಜ್ಞಾನ ಬೆಳೆದಿದೆ. ಹೊಸಬರ ಸಿನಿಮಾ ಜಾಹೀರಾತುಗಳೇ ಮತ್ತೆ ಮತ್ತೆ ನೋಡುವಂತೆ ಮೂಡಿಬರುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಅನುಭವೀ ಪೋಸ್ಟರ್ ವಿನ್ಯಾಸಗಾರರಿದ್ದಾರೆ. ಯಾರೇ ಆಗಲಿ ಕೆಲಸಕ್ಕೆ ತಕ್ಕ ಸಂಭಾವನೆ ಮತ್ತು ಸಮಯ ಕೊಟ್ಟರೆ ಮಾತ್ರ ಉತ್ತಮ ಔಟ್ಪುಟ್ ನೀಡುತ್ತಾರೆ. ಅದು ಬಿಟ್ಟು, ‘ಅದ್ಯಾವುದರಲ್ಲೋ ಮೀನು ಹಿಡಿದರು ಅನ್ನೋ ಮಾತಿದೆಯಲ್ಲಾ? ಹಾಗೆ ಎಲ್ಲೆಲ್ಲೋ ಉಳಿಸಲು ಹೋದರೆ ಹೀಗೇ ಆಗೋದು!

ದರ್ಶನ್ ಅವರಾಗಲಿ ಅಥವಾ ಯಾವುದೇ ಸ್ಟಾರ್ಗಳು ತಾವು ಒಪ್ಪಿಕೊಂಡ ಸಿನಿಮಾಗಳಲ್ಲಿ ನಟಿಸಿ ಬರುವುದರ ಜೊತೆಗೆ ಇಂಥಾ ವಿಚಾರಗಳ ಕಡೆಗೂ ಗಮನ ಹರಿಸಬೇಕು. ಇವರ ಒಂದು ಫೋಟೋ, ಪೋಸ್ಟರು ರಿಲೀಸಾಗುತ್ತದೆ ಅಂದರೆ ಅದಕ್ಕಾಗಿ ಕ್ಯಾಲೆಂಡರು, ಗಡಿಯಾರ ನೋಡುತ್ತಾ ಕಾತರದಿಂದ ಕಾಯುವ ಎಣಿಸಲಾರದಷ್ಟು ಅಭಿಮಾನಿಗಳಿರುತ್ತಾರೆ. ಏಕಾಏಕಿ ಇವತ್ತು ರಿಲೀಸಾಗುತ್ತಿಲ್ಲ ಅಂದಾಗ ಅಥವಾ ಗುಣಮಟ್ಟ ಸರಿ ಇಲ್ಲ ಅನ್ನಿಸಿದಾಗ ಸಹಜವಾಗಿಯೇ ಅಭಿಮಾನಿಗಳು ನೊಂದುಕೊಳ್ಳುತ್ತಾರೆ.
ಎಲ್ಲ ನಿರ್ಮಾಪಕರೂ ಹೀಗೇ ಅಂತಾ ಹೇಳಲಾಗುವುದಿಲ್ಲ. ರಾಬರ್ಟ್ ಸಿನಿಮಾದ ಪೋಸ್ಟರುಗಳು, ಅವರು ಹೊರಬಿಡುತ್ತಿರುವ ಮೆಟೀರಿಯಲ್ಲುಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ. ಈ ಕಾರಣಕ್ಕೇ ಒಡೆಯ ಸಿನಿಮಾಗೆ ಹೋಲಿಸಿದರೆ ರಾಬರ್ಟ್ ಸಿನಿಮಾಗೆ ಸಂಬಂಧಿಸಿದ ಪೋಸ್ಟರುಗಳಾಗಲಿ, ಫೋಟೋಗಳಾಗಲಿ ಹೆಚ್ಚು ವೈರಲ್ ಆಗುತ್ತಿವೆ. ಇನ್ನಾದರೂ ದೊಡ್ಡ ಸಂಸ್ಥೆಗಳು ಹೀರೋಗಳು ಮತ್ತು ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಿ!