ಕರ್ನಾಟಕದ ಪಾರಂಪರಾಗರ ಪಾಕವಿಧಾನ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧ ತಿನಿಸುಗಳ ಮತ್ತು ಇತರ ಅಡುಗೆ ಮಿಕ್ಸ್’ಗಳನ್ನು ಉತ್ಪಾದಿಸುವ ಸಂಸ್ಥೆ ಓಗರ. ಈಗಾಗಲೇ ರಾಜ್ಯ ಮಾತ್ರವಲ್ಲದೆ, ದೇಶದ ಇತರೆ ರಾಜ್ಯಗಳು, ಅಮೆರಿಕಾ, ಯುರೋಪ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ತೈಲರಾಷ್ಟ್ರಗಳಲ್ಲಿ ಓಗರ ತನ್ನ ಕೆಂದ್ರಗಳನ್ನು ತೆರೆದಿದೆ. ಓಗರದ ಮಸಾಲೆ, ದಿಡೀರ್ ಮಿಶ್ರಣ ಸೇರಿದಂತೆ ಇತರ ತಿನಿಸುಗಳು ಈಗ ಜಗತ್ತಿನಾದ್ಯಂತ ಅತ್ಯಂತ ಬೇಡಿಕೆ ಹೊಂದಿದೆ.
ಈ ಹಿಂದೆ ಆಕ್ಸಿಡೆಂಟ್, ಹೆಬ್ಬುಲಿ ಮತ್ತು ಜಿಗರ್ಥಂಡಾ ದಂಥ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ರಘುನಾಥ್ ಅವರ ಮತ್ತೊಂದು ಕನಸು ಓಗರ. ಸಿನಿಮಾದ ಜೊತೆಜೊತೆಗೆ ಫುಡ್ ಇಂಡಸ್ಟ್ರಿಯಲ್ಲೂ ದೊಡ್ಡ ಹೆಸರು ಮಾಡಿರುವ ರಘುನಾಥ್ ಅವರ ಓಗರಕ್ಕೆ ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ.
ಈ ವರೆಗೆ ಅನಂತ್ ನಾಗ್ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಾಡಕ್ಟುಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಮತ್ತು ಬ್ರಾಂಡ್ ಅಂಬಾಸಡರ್ ಆಗಲು ಆಫರುಗಳು ಬಂದಿದ್ದವರು. ಅನಂತ್ ಸಿನಿಮಾ ಪಾತ್ರಗಳನ್ನೇ ಅಷ್ಟು ಸುಲಭಕ್ಕೆ ಒಪ್ಪುವವರಲ್ಲ. ಅಂಥಾದ್ದರಲ್ಲಿ ಬೇರೆ ಯಾವುದೋ ಪ್ರಾಡಕ್ಟುಗಳ ಜಾಹೀರಾತನ್ನು ಒಪ್ಪುವುದಾದರೂ ಎಲ್ಲಿ? ಹೀಗಿರುವಾಗ ಅನಂತ್ ಓಗರ ಪ್ರಾಡಕ್ಟಿಗೆ ಬ್ರಾಂಡ್ ಅಂಬಾಸಡರ್ ಆಗಲು ಒಪ್ಪುತ್ತಾರೆಂದರೆ ಓಗರದ ಒಗ್ಗರಣೆ ಘಮ ಎಂಥದ್ದಿರಬಹುದು ಅಂಥಾ ನೀವೇ ಒಮ್ಮೆ ಊಹಿಸಿ!