ಈಗಾಗಲೇ ತೆರೆಕಂಡಿರುವ ಯಶಸ್ವಿ ಸಿನಿಮಾಗಳಾದ ಸೂಪರ್ ಡಿಲಕ್ಸ್ ಮತ್ತು ಮಜಿಲಿ ಸಿನಿಮಾದ ಖುಷಿಯಲ್ಲಿ ತೇಲುತ್ತಿರುವ ಸಮಂತಾ ಅಕ್ಕಿನೇನಿ ಗಂಡ ಚೈತನ್ಯ ಜೊತೆಗೆ ಜಾಲಿ ಟ್ರಿಪ್ಪನ್ನು ಮುಗಿಸಿಕೊಂಡು ಬಂದಿದ್ದಾರೆ. ಸದ್ಯ ಮಹಿಳಾ ಪ್ರಧಾನ ಬಹು ನಿರೀಕ್ಷಿತ ಓ ಬೇಬಿ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.
https://twitter.com/Samanthaprabhu2/status/1130828173581492227
ಈ ಸಿನಿಮಾದಲ್ಲಿ ಸಮಂತಾ ಜತೆ ‘ಜೂಲಿ’ ಲಕ್ಷ್ಮೀ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ‘ಓ ಬೇಬಿ’ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಅಂದಹಾಗೆ ಓ ಬೇಬಿ ಸೌತ್ ಕೋರಿಯಾದ ಮಿಸ್ ಗ್ರ್ಯಾನಿ ಸಿನಿಮಾದ ರಿಮೇಕ್ ಕೂಡ. 70 ವರ್ಷದ ವೃದ್ಧೆಯೊಬ್ಬಳು ಏಕಾಏಕಿ 20ರ ಪ್ರಾಯದ ಯುವತಿಯಾಗಿ ಬದಲಾಗುವ ಫ್ಯಾಂಟಸಿ ಕಥೆ ಈ ಸಿನಿಮಾದಲ್ಲಿದೆ. ಹಾಗಾಗಿ ಅಭಿಮಾನಿಗಳು ‘ಓ ಬೇಬಿ’ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
No Comment! Be the first one.