ಬಟ್ಟೆ ವಿಚಾರ ಬಂದಾಗ ಸೆಲೆಬ್ರಿಟಿಗಳಿಗೆ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕಂದ್ರೆ ಈವರೆಗೆ ಬಟ್ಟೆ ವಿಚಾರದಲ್ಲಿ ಅವರು ಟ್ರೋಲ್ ಆದಷ್ಟು ಇನ್ಯಾರೂ ಆಗಿರಲಿಕ್ಕೆ ಸಾಧ್ಯವಿಲ್ಲ. ತಮ್ಮ ನೆಚ್ಚಿನ ನಟ-ನಟಿಯರು ಯಾವ ರೀತಿ ಉಡುಪು ಧರಿಸುತ್ತಾರೆಂಬುದರ ಬಗ್ಗೆ ಅಭಿಮಾನಿಗಳಿಗೆ ಕೌತುಕವಿರುವುದು ಸಹಜ. ಸೆಲೆಬ್ರಿಟಿಗಳು ಯಾವುದೇ ಬಟ್ಟೆ ತೊಟ್ಟರೂ ಅದನ್ನು ಗಮನಿಸುತ್ತಾ, ಆ ಬಗ್ಗೆ ಕಮೆಂಟ್ ಮಾಡುತ್ತಾ ಇರುವ ವರ್ಗವೇ ಒಂದಿದೆ. ಅವರ ಬಳಿಯೇನಾದರೂ ತಗಲಾಕಿಕೊಂಡ್ರೆ ಕಥೆ ಮುಗೀತಂತಲೇ ಅರ್ಥ.
ಮಿಸ್ ಅಮೆರಿಕ’ ಹಾಗೂ ‘ಮಿಸ್ ಯೂನಿವರ್ಸ್’ ಪಟ್ಟವನ್ನು ಗಳಿಸಿಕೊಂಡ ಒಲಿವಿಯಾ ಕುಲ್ಪೋಗೆ ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ಅಭಿಮಾನಿ ಬಳಗ ಇದೆ. ಮಾಡೆಲ್ ಆಗಿರುವ ಈಕೆ ಸಾಕಷ್ಟು ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾಳೆ. ಬಟ್ಟೆಯೇ ಇಲ್ಲದೆ ನಗ್ನದೇಹದ ಫೋಟೋಶೂಟ್ ಮಾಡಿಸಿ ಅದನ್ನು ಹೊರಬಿಟ್ಟು ಅತೃಪ್ತ ಆತ್ಮಗಳಿಗೆ ಖುಷಿ ನೀಡುತ್ತಿರುತ್ತಾಳೆ. ಈಗ ಒಳ ಉಡುಪು ಧರಿಸದೆ ರಸ್ತೆಗಿಳಿದ ಕಾರಣಕ್ಕೆ ಸಖತ್ತಾಗಿ ಟ್ರೋಲ್ ಆಗುತ್ತಿದ್ದಾಳೆ.
ಒಲಿವಿಯಾ ಕುಲ್ಪೋ ಒಳ ಉಡುಪು ಧರಿಸದೆ ರಸ್ತೆಗಿಳಿದಿದ್ದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ”ಈ ರೀತಿ ರೋಡಿಗೆ ಬರ್ತೀರಾ..? ಥೂ… ನಿಮಗೆ ನಾಚಿಕೆ ಆಗಬೇಕು” ಎಂದು ಜನ ಟೀಕಿಸಿದ್ದಾರೆ. ಆದರೆ ಒಲಿವಿಯಾ ಕುಲ್ಪೋ ಅಭಿಮಾನಿಗಳು ಮಾತ್ರ ಆಕೆಯ ಪರ ದನಿಯೆತ್ತಿದ್ದಾರೆ.
ಇತ್ತೀಚೆಗೆ ಒಲಿವಿಯಾ ಕುಲ್ಪೋ ಪ್ರವಾಸಕ್ಕೆ ತೆರಳಿದ ಫೋಟೋ ಒಂದನ್ನು ಶೇರ್ ಮಾಡಿದ್ದಳು. ಆ ಫೋಟೋಗೆ ನೆಟ್ಟಿಗರು ಸೂಪರ್ ಅಂತಲೇ ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ಈಕೆ ಹೊಟೇಲ್ ಒಂದಕ್ಕೆ ಊಟಕ್ಕೆಂದು ತೆರಳುವಾಗ ತೊಟ್ಟಿದ್ದ ಬಟ್ಟೆಯ ಕಾರಣಕ್ಕೆ ಟೀಕೆ ಎದುರಿಸುವಂತಾಗಿದೆ. ಆ ಬಟ್ಟೆ ಸಿಕ್ಕಾಪಟ್ಟೆ ತೆಳುವಾಗಿದ್ದು, ಒಳುಡುಪು ಧರಿಸಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗಿಸುವಂತಿದೆ. ಇದನ್ನು ಗಮನಿಸಿರುವ ನೆಟ್ಟಿಗರಂತೂ ಗರಂ ಆಗಿದ್ದಾರೆ. “ಸಾರ್ವಜನಿಕ ಪ್ರದೇಶದಲ್ಲಿ ಹೀಗಾ ಕಾಣಿಸಿಕೊಳ್ಳೋದು..?” ಅಂತ ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು “ ನೀನು ಉಡುಗೆ ತೊಡುವ ಅವಶ್ಯಕತೆ ಇತ್ತಾ..?” ಎಂದು ಕಾಲೆಳಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಒಲಿವಿಯಾ ಕುಲ್ಪೋ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೆ ಸೈಲೆಂಟಾಗಿದ್ದಾಳೆ.
Comments