ರೋಲಿಂಗ್ ಡ್ರೀಮ್ಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರವೀಣ್ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್ಕುಮಾರ್ ಅವರು ನಿರ್ಮಿಸಿರುವ ‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ‘ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಇತ್ತೀಚೆಗೆ ಬಿಡುಗಡೆಯಾಯಿತು.
ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಹೋಗಲಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು, ಚಿತ್ರ ಕೂಡ ಸದ್ಯದಲ್ಲೇ ತೆರೆ ಕಾಣಲಿದೆ.
ಕಿರಣ್ ವಾರಣಾಸಿ ಅವರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಲ್ಯಾಣ್ ಸಮಿ ಅವರ ಛಾಯಾಗ್ರಹಣವಿದೆ. ವಿ.ಸುರೇಶ್ಕುಮಾರ್ ಸಂಕಲನ, ಸ್ನೇಹ ನೃತ್ಯ ನಿರ್ದೇಶನ, ಕರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಸುಮಿತ್ ಪಟೇಲ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರವೀಣ್ ಸೂಡ ಸಂಭಾಷಣೆ ಬರೆದಿದ್ದಾರೆ. ಪ್ರಭು ಮುಂಡಕರ್(ಊರ್ವಿ), ಸಂಯುಕ್ತ ಹೆಗಡೆ(ಕಿರಿಕ್ ಪಾರ್ಟಿ), sಸುಶ್ಮಿತಾ ಗೌಡ, ರಾಮಕೃಷ್ಣ, ಅರವಿಂದ್, ಎಡಕಲ್ಲು ಗುಡ್ದ ಚಂದ್ರಶೇಖರ್, ವಿಜಯ್ ಭೋಲೇನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
#
No Comment! Be the first one.