ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರದರ್ಶನಗೊಳ್ಳಲಿದೆ. ‘ರಾಮಾ ರಾಮಾ ರೇ’ ಮತ್ತು ‘ಹೆಬ್ಬುಲಿ’ಯಂತಹ ಪಕ್ಕಾ ಕಮರ್ಷಿಯಲ್‌ ಮತ್ತು ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್  ‘ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ನಿರ್ಮಿಸಿದ್ದಾರೆ. ‘ರಾಮಾ ರಾಮಾ ರೇ’ ಚಿತ್ರದ ನಿರ್ದೇಶಕ ಡಿ. ಸತ್ಯಪ್ರಕಾಶ್ ರವರೇ ಒಂದಲ್ಲಾ ಎರಡಲ್ಲಾ ಚಿತ್ರವನ್ನು ನಿರ್ದೇಶಿಸಿದ್ದರು.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮೆಚ್ಚಿನ ಹಸು ಮತ್ತು ಸಮೀರ್‌ ಎಂಬ ಏಳು ವರ್ಷದ ಬಾಲಕನ ನಡುವಿನ ಸಂಬಂಧಗಳನ್ನು ಭಾವನಾತ್ಮಕವಾಗಿ ಒಂದಲ್ಲಾ ಎರಡಲ್ಲಾ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹಸು ಮತ್ತು ಬಾಲಕನ ಸುತ್ತ ಈ ಚಿತ್ರಕಥೆ ಸಾಗುತ್ತದೆ. ಹಸು ಕಳೆದುಕೊಂಡು ಪರಿತಪಿಸುವ ಮುಗ್ಧ ಬಾಲಕನ ಪಾತ್ರವನ್ನು ರೋಹಿತ್‌ ಪಾಂಡವಪುರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಮೆಲ್ಬರ್ನ್‌ನಲ್ಲಿ ಆಗಸ್ಟ್‌ 8ರಿಂದ 17ರವರೆಗೆ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಜತೆಗೆ ಇತರ ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

CG ARUN

ಅಂದವಾದ ಚಿತ್ರಕ್ಕೆ ಜ್ಯೂನಿಯರ್ ಶ್ರೇಯಾ ಘೋಷಾಲ್ ಎಂಟ್ರಿ!

Previous article

ಕೋಟಿಗೊಬ್ಬ ಪಾರ್ಟ್ ಮೂರಕ್ಕೆ ಆರ್ಮುಗಂ ರವಿಶಂಕರ್!

Next article

You may also like

Comments

Leave a reply

Your email address will not be published. Required fields are marked *