ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಒಂದು ಕಥೆ ಹೇಳ್ಲಾ. ಗಿರೀಶ್ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿರೋ ಈ ಸಿನಿಮಾ ಇದೇ ಮಾರ್ಚ್ ೮ರಂದು ಬಿಡುಗಡೆಗೆ ಅಣಿಯಾಗಿದೆ. ಅಷ್ಟದಿಕ್ಕುಗಳಿಂದಲೂ ಕುತೂಹಲ, ನಿರೀಕ್ಷೆಗಳು ಮೂಡಿಕೊಂಡಿರುವ ಈ ಘಳಿಉಗೆಯಲ್ಲಿಯೇ ಈ ಚಿತ್ರದ ನಶೆಯ ಹಾಡೊಂದು ಎಲ್ಲರಿಗೂ ಕಿಕ್ಕೇರಿಸುವಂತೆ ಬಿಡುಗಡೆಯಾಗಿದೆ.
ಸೋಬಾನೆಂಬೋದೇ ಶಿವನಿಗೆ ಅಂತ ಆರಂಭವಾಗೋ ಈ ಹಾಡು ಧೂಮಲೀಲೆಯ, ಅಗಾಧ ನಶೆಯ ಚಿತ್ರಾವಳಿಗಳ ಮೂಲಕ ಯುವ ಸಮೂಹವನ್ನು ಆವರಿಸಿಕೊಂಡಿದೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ನೀಡಿರೋ ಈ ಹಾಡಿಗೆ ಶಿವಕುಮಾರ್ ಶೆಟ್ಟಿ ಸಾಹಿತ್ಯ ನೀಡಿದ್ದಾರೆ. ವಿಕ್ರಂ ವೇದ ಖ್ಯಾತಿಯ ಶಿವಮ್ ಈ ಹಾಡನ್ನು ಮಾದಕ ಕಠಸಿರಿಯ ಮೂಲಕ ಹಾಡಿದ್ದಾರೆ.
ತಾಂಡವ ರಾಮ್, ಸಾಕ್ಷಿ ಸೋಮಣ್ಣ, ಪ್ರತೀಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಒಂದು ಕಥೆ ಹೇಳ್ಲಾ ಚಿತ್ರ ಹಾರರ್ ಜಾನರಿನಲ್ಲಿಯೇ ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿದೆ. ಇಲ್ಲಿ ಸತ್ಯ ಘಟನೆಯಾಧಾರಿತವಾದ, ಒಂದಕ್ಕೊಂದು ಭಿನ್ನವಾದ ಒಟ್ಟು ಐದು ಕಥೆಗಳಿವೆ. ಆ ಐದೂ ಕಥೆಗಳು ಬೇರೆ ಬೇರೆಯಾಗಿದ್ದರೂ ವಿಶೇಷವಾದ ಗುಣ ಲಕ್ಷಣಗಳೊಂದಿಗೆ ಪ್ರೇಕ್ಷಕರಿಗೆ ಬೇರೆಯದ್ದೇ ಹಾರರ್ ಅನುಭವವನ್ನು ಕೊಡಲಿದೆಯಂತೆ. ಈ ಸಿನಿಮಾ ಇದೇ ಮಾರ್ಚ್ ೮ರಂದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಲೇ ಮುದಗೊಳಿಸಲಿದೆ.
No Comment! Be the first one.