ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೆಲೋಡಿ ಮೆರವಣಿಗೆ ಸಾಂಘವಾಗಿ ಮುಂದುವರೆದಿದೆ. ಸಂಕ್ರಾಂತಿಗೆ ಬಿಡುಗಡೆಯಾಗಿದ್ದ ಶಿವನಂದಿ ಹಾಡು ಮಿಲಿಯನ್ನುಗಟ್ಟಲೆ ವೀಕ್ಷಣೆಯೊಂದಿಗೆ ಟ್ರೆಂಡಿಂಗ್ನಲ್ಲಿದೆ. ಅದಾಗಲೇ ಕೊರೆಯುವ ಚಳಿಯಿಂದ ಥಂಡಿ ಮನಸುಗಳಿಗೆ ಕೆಂಡ ಸುರಿದಂಥಾ ಬೆಚ್ಚಗಿನ ಹಾಡೊಂದು ಬಿಡುಗಡೆಯಾಗಿ ಮತ್ತೆ ದಾಖಲೆ ಸೃಷ್ಟಿಸಿದೆ!
ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೇ ಅಂತ ಶುರುವಾಗೋ ಈ ರೊಮ್ಯಾಂಟಿಕ್ ಸಾಂಗ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದು ಬಿಡುಗಡೆಯಾಗಿ ನಿಮಿಷ ಕಳೆಯುತ್ತಲೇ ಲಕ್ಷಾಂತರ ವೀವ್ಸ್ ಪಡೆಯೋ ಮೂಲಕ ಮತ್ತೊಂಥರಾ ದಾಖಲೆ ಮಾಡಿ ಬಿಟ್ಟಿದೆ. ದರ್ಶನ್ ಅಭಿಮಾನಿಗಳಿಗಂತೂ ಈ ಹಾಡು ಕೇಳಿ ಹಲ್ಲು ಕಟಕಟಿಸೋ ಚಳಿಗಾಲವೂ ಬೆಚ್ಚಗಾದಂತಾಗಿದೆ!
ಈ ಹಾಡಿನ ಮೂಲಕ ಶ್ರೇಯಾ ಘೋಶಾಲ್ ಮತ್ತು ಸೋನು ನಿಗಮ್ ಜೋಡಿಯ ಹಿಟ್ ಕಾಂಬಿನೇಷನ್ ಮತ್ತೆ ಮುಂದುವರೆದಿದೆ. ಅಂದಹಾಗೆ ಈ ಹಾಡಿಗೆ ಮೋಹಕವಾದ ಸಾಹಿತ್ಯ ಬರೆದವರು ಕವಿರಾಜ್. ಇದಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಏನೇನೋ ಮೈಮೇಲೆಳೆದುಕೊಂಡು ಎಲ್ಲೋ ಕಳೆದು ಹೋದಂತಿದ್ದ ಹರಿಕೃಷ್ಣ ಯಜಮಾನ ಚಿತ್ರದ ಮೂಲಕ ಮತ್ತೆ ಫಾರ್ಮಿಗೆ ಮರಳಿರೋ ಸೂಚನೆಯೂ ದಟ್ಟವಾಗಿಯೇ ಸಿಕ್ಕಂತಾಗಿದೆ.
ಈಗ ಹಿಟ್ ಆಗಿರೋದು ಯಜಮಾನನ ಎರಡನೇ ಸಾಂಗ್. ಇದುವೇ ಯಜಮಾನ ಸಿನಿಮಾ ಮ್ಯೂಸಿಕಲ್ ಹಿಟ್ ಆಗೋ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹೀಗೆ ಯಜಮಾನ ಹಾಡುಗಳಿಗೆ ಬರುತ್ತಿರೋ ವ್ಯಾಪಕ ಮೆಚ್ಚುಗೆಗಳನ್ನ ಕಂಡು ಖುದ್ದು ದರ್ಶನ್ ಅವರೇ ಥ್ರಿಲ್ ಆಗಿದ್ದಾರೆ. ಟ್ವೀಟ್ಟರ್ ಮೂಲಕ ಧನ್ಯವಾದವನ್ನೂ ಹೇಳಿದ್ದಾರೆ.
https://www.youtube.com/watch?v=KnF-IxaDB4I #