ಕರಾವಳಿ ಭಾಗದಿಂದ ಕನ್ನಡದಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದ್ದು, ಅದಕ್ಕೆ ‘ಒಂದು ಶಾಲೆಯ ಕಥೆ’ ಎಂದು ಟೈಟಲ್ ಇಡಲಾಗಿದೆಯಂತೆ. ಇದೊಂದು ವಿಭಿನ್ನ, ಹೊಸತನದಿಂದ ಕೂಡಿರುವಕನ್ನಡ ಸಿನಿಮಾವಾಗಿದ್ದು, ಸೃಷ್ಠಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹೊರಬರಲಿದೆ. ಅಂದಹಾಗೇ ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರದೇವಸ್ಥಾನದಲ್ಲಿ ನಡೆದಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಕ್ಯಾಮೆರಾಗೆ ಚಾಲನೆ ನೀಡಿದರು. ಪ್ರಕಾಶ್ ಸುವರ್ಣ ಕಟಪಾಡಿ ಒಂದು ಶಾಲೆಯ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ವಿದ್ಯಾಲತಾ ಯು ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಶಾಲಿನಿ ಸತೀಶ್ ಶೆಟ್ಟಿ ಮುಂಬೈ, ಜಯಕರ್ ಶೆಟ್ಟಿ ಇಂದ್ರಾಳಿ ನಿರ್ಮಾಣಕ್ಕೆ ಸಾಥ್ ನೀಡಲಿದ್ದಾರೆ.
No Comment! Be the first one.